ADVERTISEMENT

ನೀಟ್ ಪರೀಕ್ಷೆಗೆ 18 ಲಕ್ಷ ಅಭ್ಯರ್ಥಿಗಳಿಂದ ಅರ್ಜಿ

ಕಳೆದ ವರ್ಷಕ್ಕಿಂತ 2.5 ಲಕ್ಷ ಹೆಚ್ಚುವರಿ ಅಭ್ಯರ್ಥಿಗಳಿಂದ ನೋಂದಣಿ

ಪಿಟಿಐ
Published 27 ಮೇ 2022, 13:31 IST
Last Updated 27 ಮೇ 2022, 13:31 IST
ಸಾಂದರ್ಭಿಕ ಚಿತ್ರ –ಪಿಟಿಐ
ಸಾಂದರ್ಭಿಕ ಚಿತ್ರ –ಪಿಟಿಐ   

ನವದೆಹಲಿ: 2022ನೇ ಸಾಲಿನಲ್ಲಿ ಸ್ನಾತಕೋತ್ತರ ವೈದ್ಯಕೀಯ/ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ (ನೀಟ್‌) 18.72 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿದ್ದಾರೆ.

ನೋಂದಾಯಿತ ಅಭ್ಯರ್ಥಿಗಳ ಪೈಕಿ ಸುಮಾರು 10.64 ಲಕ್ಷ ಮಹಿಳೆಯರು ಮತ್ತು 8.07 ಲಕ್ಷ ಮಂದಿ ಪುರುಷರು, 771 ವಿದೇಶಿಯರುಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚುವರಿ 2.5 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.

ADVERTISEMENT

ಪರೀಕ್ಷೆಯು ದೇಶದಾದ್ಯಂತ 13 ಭಾಷೆಗಳಲ್ಲಿ ಜುಲೈ 17ರಂದು ನಿಗದಿಯಾಗಿದೆ. ಕಳೆದ ವರ್ಷ ನೋಂದಾಯಿತರಾಗಿದ್ದ ಶೇ 95ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.