ADVERTISEMENT

ಸಂಸತ್‌ನ ಮತ್ತಷ್ಟು ಸಿಬ್ಬಂದಿಗೆ ಕೋವಿಡ್‌: 700ರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಐಎಎನ್ಎಸ್
Published 13 ಜನವರಿ 2022, 9:37 IST
Last Updated 13 ಜನವರಿ 2022, 9:37 IST
ರಾಯಿಟರ್ಸ್‌ ಚಿತ್ರ
ರಾಯಿಟರ್ಸ್‌ ಚಿತ್ರ   

ನವದೆಹಲಿ: ಜನವರಿ 9 ಮತ್ತು 12 ರ ನಡುವೆ ಸಂಸತ್‌ನ 300 ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್ ಬಂದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇದಕ್ಕೂ ಹಿಂದೆ, 400 ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ತಗುಲಿದ್ದ ವಿಚಾರ ಜನವರಿ 9ರಂದು ಬಹಿರಂಗವಾಗಿತ್ತು.

‘ಇಲ್ಲಿಯವರೆಗೆ ಸಂಸತ್‌ನ 718 ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲಿ 204 ಮಂದಿ ರಾಜ್ಯಸಭಾ ಸಚಿವಾಲಯದವರಾಗಿದ್ದರೆ, ಉಳಿದವರು ಲೋಕಸಭೆಯ ಸಚಿವಾಲಯ ಮತ್ತು ಇತರ ಸಿಬ್ಬಂದಿಗಳಾಗಿದ್ದಾರೆ’ ಎಂದು ಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.