ADVERTISEMENT

ವಿದೇಶದಿಂದ ಭಾರತಕ್ಕೆ 50ಸಾವಿರ ವಯಲ್ಸ್ ಆಂಪೊಟೆರಿಸಿನ್–ಬಿ ಚುಚ್ಚುಮದ್ದು: ಮಾಂಡವಿಯ

ಪಿಟಿಐ
Published 28 ಮೇ 2021, 13:39 IST
Last Updated 28 ಮೇ 2021, 13:39 IST
ಪ್ರಾತಿನಿಧಿಕ: ಐಸ್ಟಾಕ್ ಚಿತ್ರ
ಪ್ರಾತಿನಿಧಿಕ: ಐಸ್ಟಾಕ್ ಚಿತ್ರ   

ನವದೆಹಲಿ: ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಬಳಸಲಾಗುವ ಆಂಫೊಟೆರಿಸಿನ್-ಬಿ ಚುಚ್ಚುಮದ್ದಿನ50 ಸಾವಿರಕ್ಕೂ ಅಧಿಕ ವಯಲ್ಸ್ ವಿದೇಶದಿಂದ ಭಾರತಕ್ಕೆ ಬರಲಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್ ಎಲ್ ಮಾಂಡವಿಯ ಶುಕ್ರವಾರ ಹೇಳಿದ್ದಾರೆ.

ಕಪ್ಪು ಶಿಲೀಂಧ್ರ ಎಂದೂ ಕರೆಯಲ್ಪಡುವ ಮ್ಯೂಕರ್‌ ಮೈಕೊಸಿಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಂಫೊಟೆರಿಸಿನ್-ಬಿ ಔಷಧವನ್ನು ಬಳಸಲಾಗುತ್ತದೆ, ಇದು ಮೂಗು, ಕಣ್ಣುಗಳು, ಸೈನಸ್ ಮತ್ತು ಕೆಲವೊಮ್ಮೆ ಮೆದುಳಿಗೆ ಹಾನಿ ಮಾಡುತ್ತದೆ.

‘ಆಂಫೊಟೆರಿಸಿನ್ ಬಿ ಚುಚ್ಚುಮದ್ದಿನ 50,000 ವೈಯಲ್ಸ್ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಲಿವೆ. ದೇಶದಲ್ಲಿ ಈ ಔಷಧಿಯ ಅಗತ್ಯವನ್ನು ಪೂರೈಸಲು ನಾವು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಕೋವಿಡ್-19 ವಿರುದ್ಧದ ಭಾರತದ ಹೋರಾಟದಲ್ಲಿ ಅತ್ಯುತ್ತಮ ಬೆಂಬಲ ನೀಡಿದ ಗಿಲಿಯಾಡ್ ಸೈನ್ಸಸ್ ಮತ್ತು ಮೈಲಾನ್ ನ್ಯೂಸ್‌ಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಮಾಂಡವಿಯ ಟ್ವೀಟ್ ಮೂಲಕ ತಿಳಿಸಿದ್ದಾರೆ.

ADVERTISEMENT

ಆಂಫೊಟೆರಿಸಿನ್-ಬಿಯ ಹೆಚ್ಚುವರಿ 80,000 ವಯಲ್ಸ್ ಅನ್ನು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ ವಿ ಸದಾನಂದ ಗೌಡ ಅವರು ಗುರುವಾರ ಹೇಳಿದ್ದರು.

ಮ್ಯೂಕರ್‌ ಮೈಕೊಸಿಸ್ ಬಹಳ ಅಪರೂಪದ ಸೋಂಕಾಗಿದ್ದು, ಇದು ಸಾಮಾನ್ಯವಾಗಿ ಮಣ್ಣು, ಸಸ್ಯಗಳು, ಗೊಬ್ಬರ ಮತ್ತು ಕೊಳೆಯುತ್ತಿರುವ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುತ್ತದೆ. ಸೈನಸ್‌ಗಳು, ಮೆದುಳು ಮತ್ತು ಶ್ವಾಸಕೋಶದ ಮೇಲೆ ಇದು ಪರಿಣಾಮ ಬೀರುತ್ತದೆ. ಮಧುಮೇಹ ಅಥವಾ ತೀವ್ರವಾಗಿ ರೋಗನಿರೋಧಕ ಸಮಸ್ಯೆ ಇರುವ ವ್ಯಕ್ತಿಗಳಾದ ಕ್ಯಾನ್ಸರ್ ರೋಗಿಗಳು ಅಥವಾ ಎಚ್‌ಐವಿ / ಏಡ್ಸ್ ಪೀಡಿತ ವ್ಯಕ್ತಿಗಳಿಗೆ ಮಾರಣಾಂತಿಕವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.