ADVERTISEMENT

ಪ್ರತಿ ಲಕ್ಷ ಸೋಂಕು ಪ್ರಕರಣ ತಲುಪಲು ಭಾರತ ತೆಗೆದುಕೊಂಡಿದ್ದು ಎಷ್ಟು ದಿನ?

ದೇಶದಲ್ಲಿ 6 ಲಕ್ಷದ ಗಡಿ ದಾಟಿದ ಕೋವಿಡ್‍-19 ಪ್ರಕರಣಗಳು

ಪಿಟಿಐ
Published 3 ಜುಲೈ 2020, 3:25 IST
Last Updated 3 ಜುಲೈ 2020, 3:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 6 ಲಕ್ಷದ ಗಡಿ ದಾಟಿದ್ದು, ಕಳೆದ 5 ದಿನಗಳ ಅವಧಿಯಲ್ಲಿ ಒಂದು ಲಕ್ಷ ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ ಮೊದಲ 1 ಲಕ್ಷ ಪ್ರಕರಣಗಳು ದಾಖಲಾಗಲು 110 ದಿನಗಳು ಗತಿಸಿದ್ದವು. ನಂತರದ 44 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ 6 ಲಕ್ಷದ ಗಡಿ ದಾಟಿವೆ.ಮೇ 19 ರಂದು ಒಂದು ಲಕ್ಷ ಕೊರೊನಾ ವೈರಸ್ ಪ್ರಕರಣಗಳನ್ನು ಕಾಣಲು ಭಾರತ 110 ದಿನಗಳನ್ನು ತೆಗೆದುಕೊಂಡಿತ್ತು. ಜೂನ್ 3 ರಂದು ಭಾರತವು ಎರಡು ಲಕ್ಷ ಪ್ರಕರಣ ಕಂಡಿತ್ತು. ಜೂನ್ 13 ರಂದು ಮೂರು ಲಕ್ಷ ಪ್ರಕರಣಗಳನ್ನು ತಲುಪಿತು. ನಾಲ್ಕು ಲಕ್ಷ ಪ್ರಕರಣಗಳನ್ನು ತಲುಪಲು ಭಾರತಕ್ಕೆ ಕೇವಲ 8 ದಿನಗಳು ಬೇಕಾದವು. ಭಾರತವು ನಾಲ್ಕು ಲಕ್ಷದಿಂದ ಐದು ಲಕ್ಷ ಪ್ರಕರಣಗಳನ್ನು ತಲುಪಲು ಆರು ದಿನಗಳು ಮತ್ತು ಆರು ಲಕ್ಷ ತಲುಪಲು ಕೇವಲ ಐದು ದಿನಗಳನ್ನಷ್ಟೇ ತೆಗೆದುಕೊಂಡಿದೆ.

ಗುರುವಾರ ಒಂದೇ ದಿನ 19,148 ಪ್ರಕರಣಗಳು ದೃಢಪಟ್ಟಿದ್ದು, ಕೋವಿಡ್ ಪೀಡಿತರ ಸಂಖ್ಯೆ 6,04,641 ಆಗಿದೆ.ಕಳೆದ 24 ಗಂಟೆಗಳಲ್ಲಿ 434 ಜನರು ಸತ್ತಿದ್ದು, ದೇಶದಲ್ಲಿ ಇದುವರೆಗೂ ಕೋವಿಡ್‍-19ನಿಂದ 17,834 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ADVERTISEMENT

ದೇಶದಲ್ಲಿ ಸತತ ಆರನೇ ದಿನ 18 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.ಅಂಕಿ ಅಂಶಗಳ ಪ್ರಕಾರ, ಶೇ 59.52ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜುಲೈ 1ರವರೆಗೂ ಒಟ್ಟು 90,56,173 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಬುಧವಾರ ಒಂದೇ ದಿನ 2,29,588 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.