ADVERTISEMENT

ಪ್ರಧಾನಿ ವಿರುದ್ಧ ಹರಿಹಾಯ್ದ ಒವೈಸಿ

ಪಿಟಿಐ
Published 25 ಮಾರ್ಚ್ 2019, 17:05 IST
Last Updated 25 ಮಾರ್ಚ್ 2019, 17:05 IST
ಒವೈಸಿ
ಒವೈಸಿ   

ಹೈದರಾಬಾದ್‌: ‘ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಅವರು ದನದ ಮಾಂಸದ ಬಿರಿಯಾನಿ ಸೇವಿಸಿ ನಿದ್ರೆ ಮಾಡುತ್ತಿದ್ದರೇ‘ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಪ್ರಧಾನಿ ವಿರುದ್ಧ ಒವೈಸಿ ಸಹೋದರರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪಾಕಿಸ್ತಾನದ ಬಾಲಾಕೋಟ್‌ನ ಉಗ್ರರ ತರಬೇತಿ ಶಿಬಿರಗಳಲ್ಲಿ 300 ಮೊಬೈಲ್‌ ಫೋನ್‌ಗಳು ಕಾರ್ಯನಿರತವಾಗಿದ್ದವು ಎಂಬುದನ್ನು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್‌ಟಿಆರ್‌ಒ) ಪತ್ತೆ ಮಾಡಿದೆ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ನೀಡಿರುವ ಹೇಳಿಕೆಯನ್ನು ಒವೈಸಿಟೀಕಿಸಿದ್ದಾರೆ. ಬಾಲಾಕೋಟ್‌ನಲ್ಲಿ ಮೊಬೈಲ್‌ ಪತ್ತೆ ಆಗಿರುವುದನ್ನು ಹೇಳುವ ರಾಜನಾಥ್‌ ಅವರಿಗೆ ದೆಹಲಿಯಲ್ಲಿದ್ದರೂ ಪುಲ್ವಾಮಾಕ್ಕೆ 50 ಕೆ.ಜಿ. ಆರ್‌ಡಿಎಕ್ಸ್‌ ಬಂದಿರುವ ಬಗ್ಗೆ ಮಾಹಿತಿ ಗೊತ್ತಾಗಲಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಪುಲ್ವಾಮಾಕ್ಕೆ 50 ಕೆ.ಜಿ. ಆರ್‌ಡಿಎಕ್ಸ್‌ ಸಾಗಿಸಲಾಗಿದೆ. ಇದು ನಿಮಗೆ ಗೊತ್ತಾಗಲಿಲ್ಲವೇ? ನೀವು ಸಹ ದನದ ಮಾಂಸದ ಬಿರಿಯಾನಿ ಸೇವಿಸಿ ನಿದ್ರೆ ಮಾಡುತ್ತಿರಬಹುದೆ’ ಎಂದು ಅವರು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.