ADVERTISEMENT

ರಾಜಕೀಯ ಏನೆಂದು ನೀವು ಹೇಳಬೇಡಿ ಯುದ್ಧ ಏನೆಂದು ನಾವು ಹೇಳಲ್ಲ: ರಾವತ್‌ಗೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 10:09 IST
Last Updated 28 ಡಿಸೆಂಬರ್ 2019, 10:09 IST
   

ಲಖನೌ: ‘ಸೇನಾ ಮುಖ್ಯಸ್ಥರು ರಾಜಕೀಯದ ಬಗ್ಗೆ ಸಲಹೆಗಳನ್ನು ನೀಡಬಾರದು. ಯುದ್ಧ ಮಾಡುವುದು ಹೇಗೆಂಬುದರ ಬಗ್ಗೆ ನಾವು ನಿಮಗೆ ಹೇಳುವುದಿಲ್ಲ,’ ಎಂದು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಅವರಿಗೆ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಅವರು ಸಲಹೆ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ತಿರುವನಂತಪುರಂನಲ್ಲಿಕಾಂಗ್ರೆಸ್‌ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿರುವ ಅವರು, ‘ಕಾಯ್ದೆ ವಿಚಾರದಲ್ಲಿಸರ್ಕಾರವನ್ನು ಬೆಂಬಲಿಸುವಂತೆ ಡಿಜಿಪಿ, ಸೇನೆಮುಖ್ಯಸ್ಥರೇ ಕೇಳುತ್ತಿದ್ದಾರೆ. ಇದು ನಾಚಿಕ್ಕೇಡಿನ ಸಂಗತಿ. ಸೇನೆಯ ಮುಖ್ಯಸ್ಥರಿಗೆ ನಾನೊಂದು ಮಾತು ಹೇಳುತ್ತೇನೆ. ನೀವು ಸೇನೇಯ ನೇತೃತ್ವ ವಹಿಸಿರುವವರು. ನಿಮ್ಮ ಕೆಲಸ ನೀವು ಮಾಡಿ. ರಾಜಕಾರಣಿಗಳು ಏನು ಮಾಡಬೇಕು ಎಂಬುದನ್ನು ನೀವು ಹೇಳಿಕೊಡಬೇಕಿಲ್ಲ. ಹಾಗೆಯೇ ಯುದ್ಧ ಹೇಗೆ ಮಾಡಬೇಕು ಎಂಬುದನ್ನು ನಾವು ಹೇಳಿಕೊಡುವುದಿಲ್ಲ. ನಾವು ಆ ಬಗ್ಗೆ ಸಲಹೆಗಳನ್ನು ಕೊಡುವುದಿಲ್ಲ,’ ಎಂದಿದ್ದಾರೆ.

ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟಗಳನ್ನು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಅವರು ಟೀಕಿಸಿದ್ದರು. ‘ಜನರನ್ನು ತಪ್ಪುದಾರಿಯಲ್ಲಿ ಮುನ್ನಡೆಸುವವನು ನಾಯಕನಾಗುವುದಿಲ್ಲ. ಸಿಎಎ ವಿರುದ್ಧ ನಡೆದ ಪ್ರತಿಭಟನೆಗಳನ್ನು ಕಂಡಿದ್ದೇವೆ. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಬಹಳಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಹಿಂಸಾತ್ಮಕ ಕೃತ್ಯಕ್ಕಾಗಿ ಜನರನ್ನು ಬಳಸಿಕೊಂಡಿದ್ದಾರೆ. ಇದನ್ನು ನಾಯಕತ್ವ ಎನ್ನವುದಿಲ್ಲ’ ಎಂದು ಹೇಳಿದ್ದರು.

ರಾವತ್‌ ಅವರ ಈ ಹೇಳಿಕೆಯನ್ನು ಬಿಜೆಪಿಯ ಉತ್ತರ ಪ್ರದೇಶ ಶಾಸಕ ರಾಧಾಮೋಹನ್ ದಾಸ್ ಟೀಕಿಸಿದ್ದರು. ‘ರಾವುತ್ ಅವರ ಹೇಳಿಕೆಯು ಸೇನಾ ಕಾಯ್ದೆಯ ಉಲ್ಲಂಘನೆಯಾಗಿದ್ದು, ರಾಜಕೀಯ ಸ್ವರೂಪದ್ದಾಗಿವೆ. ಸರ್ಕಾರವು, ರಾವುತ್ ಅವರನ್ನು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥನನ್ನಾಗಿ ನೇಮಿಸಬಾರದು. ಭಾರತೀಯ ಸೇನೆಯು ರಾಜಕೀಯ ವಿರೋಧಿ ಸಂಸ್ಥೆ ಎಂದು ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಈ ಗುರುತನ್ನು ಕಳೆದುಕೊಂಡಲ್ಲಿ ನಾವೂ ಪಾಕಿಸ್ತಾನದಂತೆಯೇ ಆಗುತ್ತೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.