ADVERTISEMENT

ಕೋವಿಡ್–19 | ಪದ್ಮಶ್ರೀ ಪುರಸ್ಕೃತ ಸಾವು: ಪಂಜಾಬ್‌ನಲ್ಲಿ ಮೃತರ ಸಂಖ್ಯೆ 6ಕ್ಕೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 5:35 IST
Last Updated 2 ಏಪ್ರಿಲ್ 2020, 5:35 IST
ಭಾಯ್‌ ನಿರ್ಮಲ್‌ ಸಿಂಗ್‌ ಖಾಸ್ಲಾ, ಟ್ವಿಟರ್‌ ಚಿತ್ರ
ಭಾಯ್‌ ನಿರ್ಮಲ್‌ ಸಿಂಗ್‌ ಖಾಸ್ಲಾ, ಟ್ವಿಟರ್‌ ಚಿತ್ರ   

ಅಮೃತಸರ: ಪದ್ಮಶ್ರೀ ಪುರಸ್ಕೃತ 67 ವರ್ಷ ವಯಸ್ಸಿನ ಭಾಯ್‌ ನಿರ್ಮಲ್‌ ಸಿಂಗ್‌ ಖಾಸ್ಲಾ ಅವರು ಇಂದು ಮುಂಜಾನೆ 4.30ರ ವೇಳೆಗೆ ಮೃತಪಟ್ಟಿದ್ದಾರೆ. ಅವರಿಗೆ ಕೊರೊನಾವೈರಸ್‌ ಇರುವುದು ಬುಧವಾರ ದೃಢಪಟ್ಟಿತ್ತು.

ಅಸ್ತಮಾ ಸಮಸ್ಯೆಯಿಂದಲೂ ಬಳಲುತ್ತಿದ್ದ ಸಿಂಗ್‌ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಪ್ರದೀಪ್‌ ಕೌರ್‌ ಜೋಹಲ್‌ ಹೇಳಿದ್ದಾರೆ.

ಇದರೊಂದಿಗೆ ಪಂಜಾಬ್‌ನಲ್ಲಿ ಕೋವಿಡ್‌–19ಗೆ ಬಲಿಯಾದವರ ಸಂಖ್ಯೆ ಆರಕ್ಕೇರಿದೆ.

ಧರ್ಮ ಬೋಧಕರಾಗಿದ್ದ ಸಿಂಗ್‌ಅವರನ್ನುಉಸಿರಾಟದ ಸಮಸ್ಯೆಯಿಂದಾಗಿ ಇಲ್ಲಿನ ಗುರು ರಾಮ್‌ ದಾಸ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಅವರನ್ನುಗುರು ನಾನಕ್‌ ದೇವ್‌ ಆಸ್ಪತ್ರೆಗೆ ಮಾರ್ಚ್‌ 30ರಂದು ದಾಖಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.