ADVERTISEMENT

ಚೆನಾಬ್‌ ಸೇತುವೆ | ದೇಶದಲ್ಲಿ ಕೋಮು ಗಲಭೆಗೆ ಪಾಕಿಸ್ತಾನ ಪ್ರಚೋದನೆ: ಪ್ರಧಾನಿ ಮೋದಿ

ಪಿಟಿಐ
Published 6 ಜೂನ್ 2025, 11:20 IST
Last Updated 6 ಜೂನ್ 2025, 11:20 IST
<div class="paragraphs"><p>ಪ್ರಧಾನಿ ಮೋದಿ, ಸಿಎಂ ಓಮರ್</p></div>

ಪ್ರಧಾನಿ ಮೋದಿ, ಸಿಎಂ ಓಮರ್

   

ಕಟ್ರಾ: ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಭಾರತದಲ್ಲಿ ಕೋಮು ಗಲಭೆಗಳಿಗೆ ಪ್ರಚೋದನೆ ನೀಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಚೆನಾಬ್‌ ನದಿಗೆ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕಾಶ್ಮೀರದಲ್ಲಿ ಜನರ ದುಡಿಮೆಯನ್ನು ನಾಶ ಮಾಡಬೇಕು ಎಂದು ಪಾಕಿಸ್ತಾನದ ಉದ್ದೇಶಿಸಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ADVERTISEMENT

‘ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸುವ ಮೂಲಕ ಪಾಕಿಸ್ತಾನವು ‘ಮಾನವೀಯತೆ’ ಹಾಗೂ ‘ಕಾಶ್ಮೀರದ ಅಸ್ಮಿತೆ’ ಮೇಲೆಯೂ ದಾಳಿ ಮಾಡಿದೆ. ಕಾಶ್ಮೀರ ಜನರು ತಮ್ಮ ಜೀವನೋಪಾಯಕ್ಕೆ ಪ್ರವಾಸೋದ್ಯಮವನ್ನೇ ಅಲವಂಬಿಸಿದ್ದಾರೆ. ಆದರೆ, ಪಾಕಿಸ್ತಾನ ಪ್ರವಾಸೋದ್ಯಮಕ್ಕೇ ಪೆಟ್ಟು ಕೊಡುವ ಮೂಲಕ ಇಲ್ಲಿನ ಜನರ ಬದುಕನ್ನು ಕಸಿಯಲು ಯತ್ನಿಸಿದೆ’ ಎಂದೂ ವಾಗ್ದಾಳಿ ನಡೆಸಿದ್ದಾರೆ.

‘ಪ್ರವಾಸೋದ್ಯಮ ಕಾಶ್ಮೀರ ಜನತೆಗೆ ಉದ್ಯೋಗ ನೀಡುವ ಜೊತೆಗೆ, ದೇಶದ ಇತರ ಜನರೊಂದಿಗೆ ಬೆಸೆಯುವ ಸೇತುವೆಯೂ ಆಗಿದೆ. ದುರದೃಷ್ಟವಶಾತ್‌, ನಮ್ಮ ನೆರೆಯ ರಾಷ್ಟ್ರವು ಮಾನವೀಯತೆ, ಸೌಹಾರ್ದ ಹಾಗೂ ಪ್ರವಾಸೋದ್ಯಮದ ಶತ್ರುವಾಗಿದೆ’ ಎಂದು ಟೀಕಾಪ್ರಹಾರವನ್ನು ಹರಿತಗೊಳಿಸಿದರು.

‘ಪ್ರವಾಸಿಗರ ಗೈಡುಗಳು, ಕುದುರೆ ಸವಾರಿ ಸೇವೆ ಒದಗಿಸುವವರು, ಅತಿಥಿ ಗೃಹಗಳ ಮಾಲೀಕರು, ಅಂಗಡಿಕಾರರು, ರಸ್ತೆ ಬದಿಯ ಢಾಬಾ ನಡೆಸುವವರಿಗೆ ಪ್ರವಾಸೋದ್ಯಮವೇ ಬದುಕಿನ ಆಧಾರ. ಅಂತಹ ಪ್ರವಾಸೋದ್ಯಮವನ್ನೇ ನಾಶ ಮಾಡುವುದಕ್ಕೆ ಪಾಕಿಸ್ತಾನ ಬಯಸಿತು. ಉಗ್ರರಿಗೆ ತಡೆಯೊಡ್ಡಿದ್ದ ಆದಿಲ್‌ ಕೂಡ ತನ್ನ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದರು’ ಎಂದು ಮೋದಿ ಹೇಳಿದರು.

‘ಆಪರೇಷನ್‌ ಸಿಂಧೂರ’ ಪ್ರಸ್ತಾಪಿಸಿದ ಮೋದಿ, ‘ಈ ಕಾರ್ಯಾಚರಣೆಗೆ ಇಂದು ತಿಂಗಳು ತುಂಬಿದೆ. ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ನಮ್ಮ ಸೇನಾ ಪಡೆಗಳು ಈ ಕಾರ್ಯಾಚರಣೆ ನಡೆಸಿ ಧ್ವಂಸಗೊಳಿಸಿವೆ’ ಎಂದರು ಹೇಳಿದರು.‌‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.