ADVERTISEMENT

ಪಾಕ್‌ ಯುವಕ ಬಂಧನ: ನೂಪುರ್ ಹತ್ಯೆ ಸಂಚು ಬಹಿರಂಗ

ಪಿಟಿಐ
Published 22 ಜುಲೈ 2022, 16:14 IST
Last Updated 22 ಜುಲೈ 2022, 16:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೈಪುರ: ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದಭಾರತಕ್ಕೆ ಕಳ್ಳತನದಿಂದ ಒಳನುಗ್ಗಿದ ರಿಜ್ವಾನ್‌ ಅಷ್ರಫ್‌ (24) ಎಂಬ ವ್ಯಕ್ತಿಯನ್ನು, ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧರು ಬಂಧಿಸಿ, ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ರಿಜ್ವಾನ್, ಭಾರತ–ಪಾಕಿಸ್ತಾನ ಗಡಿಯಲ್ಲಿನ ಶ್ರೀ ಗಂಗಾನಗರದಹಿಂದೂಮಲ್ಕೋಟ್‌ ಮೂಲಕ ಜುಲೈ 16 ಮತ್ತು 17ರ ಮಧ್ಯರಾತ್ರಿ ಭಾರತಕ್ಕೆ ಒಳನುಸುಳುವಾಗ ಬಂಧಿಸಲಾಗಿತ್ತು.

‘ನೂಪುರ್‌ ಅವರನ್ನು ಕೊಲ್ಲಲು ಬಂದಿರುವ ಬಂಧಿತ, ತನ್ನ ದೇಶದ ಬಲಪಂಥೀಯ ಮುಸ್ಲಿಂ ಸಂಘಟನೆಯಾದ ತಹ್ರಿಕ್–ಎ–ಲಬ್ಬೈಕ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ’ ಎಂದು ಶ್ರೀ ಗಂಗಾನಗರದ ಪೊಲೀಸ್‌ ವರಿಷ್ಠಾಧಿಕಾರಿ ಆನಂದ್‌ ಶರ್ಮಾ ತಿಳಿಸಿದ್ದಾರೆ.

ADVERTISEMENT

‘ಪ್ರವಾದಿ ಮಹಮ್ಮದ್‌ರ ವಿರುದ್ಧ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಆರೋಪಿಯ ಗ್ರಾಮದಲ್ಲಿ ತಹ್ರಿಕ್–ಎ–ಲಬ್ಬೈಕ್‌ ಸಂಘಟನೆಯು ಒಂದು ತಿಂಗಳ ಹಿಂದೆ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಈತ, ಧಾರ್ಮಿಕ ಸಭೆಯಿಂದ ಪ್ರೇರಿತನಾಗಿ ನೂಪುರ್‌ ಅವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದ’ ಎಂದುಆನಂದ್‌ ಶರ್ಮಾ ಹೇಳಿದರು.

ಸದ್ಯ ಆರೋಪಿಯ ಬಳಿಯಿದ್ದ ಬ್ಯಾಗ್‌ನಿಂದ ಎರಡು ಚಾಕುಗಳು, ಧಾರ್ಮಿಕ ಪುಸ್ತಕಗಳು, ಆಹಾರ ಮತ್ತು ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.