ನವದೆಹಲಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಕಟಾಸ್‌ರಾಜ್ ಧಾಮ್ ಶಿವ ದೇವಾಲಯಕ್ಕೆ ಭೇಟಿ ನೀಡಲು ಭಾರತದ 139 ಯಾತ್ರಿಕರಿಗೆ ವೀಸಾ ನೀಡಲಾಗಿದೆ ಎಂದು ಪಾಕಿಸ್ತಾನದ ಹೈಕಮಿಷನ್ ಹೇಳಿದೆ.
ದ್ವಿಪಕ್ಷೀಯ ಶಿಷ್ಟಾಚಾರದಂತೆ ಪ್ರತಿವರ್ಷ ಸಿಖ್ ಹಾಗೂ ಹಿಂದೂ ಯಾತ್ರಿಕರು ಪಾಕಿಸ್ತಾನದ ಧಾರ್ಮಿಕ ಕೇಂದ್ರಗಳಿಗೂ ಅಲ್ಲಿನ ಯಾತ್ರಿಕರೂ ಭಾರತಕ್ಕೂ ಭೇಟಿ ನೀಡುತ್ತಾರೆ.
ಕಳೆದ ತಿಂಗಳು 3,800ಕ್ಕೂ ಹೆಚ್ಚು ಸಿಖ್ ಯಾತ್ರಿಕರಿಗೆ ಪಾಕಿಸ್ತಾನ ವೀಸಾ ನೀಡಿತ್ತು.
ಭಾರತದ ಯಾತ್ರಿಕರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದೂ ಪಾಕಿಸ್ತಾನದ ಹೈಕಮಿಷನ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.