ADVERTISEMENT

ಜಮ್ಮು–ಕಾಶ್ಮೀರದ ಬಗ್ಗೆ ನಕಲಿ ಸುದ್ದಿಗಳ ಪ್ರಚಾರ: ಎಚ್ಚರಿಕೆ

ಪಿಟಿಐ
Published 1 ಸೆಪ್ಟೆಂಬರ್ 2019, 5:05 IST
Last Updated 1 ಸೆಪ್ಟೆಂಬರ್ 2019, 5:05 IST

ಮುಂಬೈ: ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದವಿಶೇಷಾಧಿಕಾರ ರದ್ದತಿಯ ಅಲ್ಲಿ ದೊಡ್ಡ ಪ್ರಮಾಣ ಹಿಂಸಾಚಾರ ನಡೆದಿದೆ ಎಂದು ತಪ್ಪು ಗ್ರಹಿಕೆ ಮೂಡಿಸಲು ಪ್ರಾಕಿಸ್ತಾನ ಕಳಪೆ ಅಭಿಯಾನ ನಡೆಸುತ್ತಿದ್ದು, ನಕಲಿ ವಿಡಿಯೊಗಳು ಮತ್ತು ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಸೈಬರ್ ಪೊಲೀಸ್ ಅಧಿಕಾರಿ ಶನಿವಾರ ಹೇಳಿದರು.

ಕಾಶ್ಮೀರ ವಿಷಯದ ಬಗ್ಗೆ ಜನರಲ್ಲಿ ಇನ್ನಷ್ಟು ಆಸಕ್ತಿ ಮೂಡಿಸುವ ಉದ್ದೇಶದಿಂದ ಇಂತಹ ನಕಲಿ ಸುದ್ದಿಗಳನ್ನು ಪಾಕಿಸ್ತಾನದ ಕೆಲವರು ಹಂಚಿಕೊಳ್ಳುತ್ತಿದ್ದಾರೆ ಎಂದು ಮಹಾರಾಷ್ಟ್ರ ಸೈಬರ್ ವಿಭಾಗದ ಪ್ರಧಾನ ವಿಶೇಷ ಪೊಲೀಸ್ ಇನ್ಸ್‌ಪೆಕ್ಟರ್ (ಐಜಿಪಿ) ಬ್ರಿಜೇಶ್ ಸಿಂಗ್ ಹೇಳಿದ್ದಾರೆ.

ಪಾಕಿಸ್ತಾನವು ಸಾಮಾಜಿಕ ಜಾಲತಾಣಗಳಲ್ಲಿ ಏಕರೂಪದ ತಪ್ಪು ಮಾಹಿತಿಯ ಅಲೆಯನ್ನು ಪ್ರಕಟಿಸುತ್ತಿದೆ. ಇಂತಹಪ್ರಚೋದಕಾರಿ ಸುದ್ದಿಗಳನ್ನು ಭಾರತೀಯ ಹೆಸರುಗಳನ್ನು ಹೊಂದಿರುವ ಹಲವು ನಕಲಿ ಖಾತೆಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಭಾರತದ ಪೊಲೀಸರು ಮತ್ತು ಸೇನೆಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಜನರು ಇಂತಹ ಅಪಪ್ರಚಾರಗಳಿಗೆ ಮಹತ್ವ ನೀಡಬಾರದು. ಇಂತಹ ವಿಷಯಗಳನ್ನು ಫಾರ್ವಡ್‌ ಮಾಡಬಾರದು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.