ADVERTISEMENT

ಪಾಕ್‌ನಿಂದ ‘ಶಹೀನ್‌–I’ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ

ಪಿಟಿಐ
Published 18 ನವೆಂಬರ್ 2019, 19:45 IST
Last Updated 18 ನವೆಂಬರ್ 2019, 19:45 IST
ಶಾಹೀನ್ ಕ್ಷಿಪಣಿ (ಪ್ರಾತಿನಿಧಿಕ ಚಿತ್ರ)
ಶಾಹೀನ್ ಕ್ಷಿಪಣಿ (ಪ್ರಾತಿನಿಧಿಕ ಚಿತ್ರ)   

ಇಸ್ಲಾಮಾಬಾದ್: ಸುಮಾರು 650 ಕಿ.ಮೀ ವ್ಯಾಪ್ತಿವರೆಗೂ ಎಲ್ಲ ರೀತಿಯ ಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯವುಳ್ಳ, ಭೂಮಿಯಿಂದ ಭೂಮಿಗೆ ಚಿಮ್ಮಿಸಬಹುದಾದ ‘ಶಹೀನ್‌–I’ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯನ್ನು ಪಾಕಿಸ್ತಾನ ಸೋಮವಾರ ಯಶಸ್ವಿಯಾಗಿ ನಡೆಸಿತು.

ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗದ ಹೇಳಿಕೆಯ ಅನುಸಾರ, ಯಾವುದೇ ಪರಿಸ್ಥಿತಿ ಎದುರಿಸಲು ಸೇನೆಯನ್ನು ಸನ್ನದ್ಧವಾಗಿಡುವ ಕಾರ್ಯತಂತ್ರದ ಭಾಗವಾಗಿ ಪರೀಕ್ಷೆ ನಡೆಯಿತು ಎಂದು ತಿಳಿಸಿದೆ.

ಕ್ಷಿಪಣಿಯು ಎಲ್ಲ ರೀತಿಯ ಸಿಡಿತಲೆಗಳನ್ನು ಒಯ್ಯುವ ಸಾಮಥ್ಯ ಹೊಂದಿದೆ ಎಂದು ತಿಳಿಸಿದೆ. ಭಾರತವು ‘ಅಗ್ನಿ II’ ಕ್ಷಿಪಣಿಯ ಪರೀಕ್ಷೆ ನಡೆಸಿದ ಹಿಂದೆಯೇ ಪಾಕಿಸ್ತಾನವೂ ಈ ಕ್ರಮಕ್ಕೆ ಮುಂದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.