ADVERTISEMENT

ಆಕಸ್ಮಿಕವಾಗಿ ಗಡಿ ದಾಟಿದ್ದ ಪಾಕ್‌ ಪ್ರಜೆ ವಾಪಸ್‌

ಪಿಟಿಐ
Published 27 ಸೆಪ್ಟೆಂಬರ್ 2025, 15:37 IST
Last Updated 27 ಸೆಪ್ಟೆಂಬರ್ 2025, 15:37 IST
   

ಜಮ್ಮು: ಆಕಸ್ಮಿಕವಾಗಿ ಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ಪ್ರಜೆಯೊಬ್ಬರನ್ನು ಗಡಿ ಭದ್ರತಾ ಪಡೆಯು ಮರಳಿ ಪಾಕಿಸ್ತಾನಕ್ಕೆ ಶುಕ್ರವಾರ ಕಳುಹಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಗಡಿ ಪ್ರವೇಶಿಸಿದ್ದ ಮೊಹಮ್ಮದ್‌ ಅಕ್ರಂ ಅವರನ್ನು ಜಮ್ಮುವಿನ ಆರ್‌.ಎಸ್‌. ಪುರ ಹೊರವಲಯದಲ್ಲಿ ಸೆಪ್ಟೆಂಬರ್‌ 25ರಂದು ವಶಕ್ಕೆ ಪಡೆಯಲಾಗಿತ್ತು. 

ಯಾವುದೇ ಅನುಮಾನಾಸ್ಪದ ವಸ್ತುಗಳು ಅವರ ಬಳಿ ಇರಲಿಲ್ಲ. ಆಕಸ್ಮಿಕವಾಗಿ ಗಡಿ ಪ್ರವೇಶಿಸಿರುವುದು ತನಿಖೆಯಿಂದ ಖಚಿತವಾದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.