ಇಸ್ಲಾಮಾಬಾದ್: 53 ನಾಗರಿಕರು, 193 ಮೀನುಗಾರರು ಸೇರಿದಂತೆ 246 ಭಾರತೀಯರು ತಮ್ಮ ದೇಶದ ಜೈಲುಗಳಲ್ಲಿ ಇರುವುದಾಗಿ ಪಾಕಿಸ್ತಾನ ಮಾಹಿತಿ ನೀಡಿದೆ.
ಉಭಯ ದೇಶಗಳು ಮಂಗಳವಾರ ತಮ್ಮಲ್ಲಿರುವ ಕೈದಿಗಳ ಪಟ್ಟಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿವೆ. 2008ರ ಒಪ್ಪಂದದಂತೆ ಭಾರತ ಮತ್ತು ಪಾಕಿಸ್ತಾನ ಪ್ರತಿವರ್ಷ ಜನವರಿ 1ರಿಂದ ಜುಲೈ 1ರವರೆಗೆ ತಂತಮ್ಮ ದೇಶಗಳ ಜೈಲಿನಲ್ಲಿರುವ ಕೈದಿಗಳ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.
ಪಾಕಿಸ್ತಾನಿಯರು ಅಥವಾ ಹಾಗೆಂದು ನಂಬಲಾದ 463 (382 ನಾಗರಿಕರು ಮತ್ತು 81 ಮೀನುಗಾರರು) ಜನರ ಮಾಹಿತಿಯನ್ನು ಭಾರತವು ಪಾಕಿಸ್ತಾನಕ್ಕೆ ನೀಡಿದೆ.
ಜೈಲಿನಲ್ಲಿರುವ ತಮ್ಮ ದೇಶದ ಪ್ರಜೆಗಳ ಸುರಕ್ಷತೆ ಬಗ್ಗೆ ಗಮನಹರಿಸುವಂತೆ ಮತ್ತು ಶೀಘ್ರವಾಗಿ ಬಿಡುಗಡೆಗೊಳಿಸುವಂತೆ ಉಭಯದೇಶಗಳು ಪರಸ್ಪರ ಒತ್ತಾಯಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.