ನವದೆಹಲಿ/ಗುರುದಾಸ್‌ಪುರ: ಎಕೆ ಸರಣಿಯ ರೈಫಲ್ ಮತ್ತು ಮೂರು ಡಜನ್‌ಗೂ ಹೆಚ್ಚು ಬುಲೆಟ್ ರೌಂಡ್ಸ್ ಅನ್ನು ಹೊತ್ತು ಪಾಕಿಸ್ತಾನದಿಂದ ಭಾರತದೊಳಗೆ ಪ್ರವೇಶಿಸಿದ್ದ ಡ್ರೋನ್ ಅನ್ನು ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಹೊಡೆದುರುಳಿಸಿದೆ.
ಗಡಿ ರಾಜ್ಯದ ಗುರುದಾಸ್‌ಪುರ ಜಿಲ್ಲೆಯ ಮೆಟ್ಲಾ ಹಳ್ಳಿ ಬಳಿ ತಡರಾತ್ರಿ 1 ಗಂಟೆ ಸುಮಾರಿಗೆ ಹೆಕ್ಸಾಕಾಪ್ಟರ್ ಅನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.
'ಕಾರ್ಯಾಚರಣೆಗಾಗಿ ಇಡೀ ಪ್ರದೇಶವನ್ನು ಸುತ್ತುವರಿಯಲಾಗಿತ್ತು. ಪೊಲೀಸರು ಸಹ ಕಾರ್ಯಾಚರಣೆಯಲ್ಲಿ ಇದ್ದರು’ ಎಂದು ಅವರು ಹೇಳಿದ್ದಾರೆ.
ಎಕೆ ರೈಫಲ್ ಜೊತೆಗೆ ಎರಡು ಮ್ಯಾಗಜಿನ್ ಮತ್ತು 40 ಬುಲೆಟ್ ರೌಂಡ್ಸ್‌ಗಳನ್ನು ಡ್ರೋನ್ ಒಳಗೊಂಡಿತ್ತು. ನಬಿ ನಗರ್ ಹಳ್ಳಿಯ ಹೊಲವೊಂದರಲ್ಲಿ ಬಿದ್ದಿದ್ದ ಡ್ರೋನ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.