ADVERTISEMENT

ಗಡಿ ದಾಟಿ ಬಂದ ಪಾಕಿಸ್ತಾನದ ಮಹಿಳೆಯ ಬಂಧನ

ಪಿಟಿಐ
Published 16 ಜುಲೈ 2022, 2:28 IST
Last Updated 16 ಜುಲೈ 2022, 2:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಯನ್ನು ದಾಟಿ ಬಂದ ಪಾಕಿಸ್ತಾನದ ಮಹಿಳೆಯನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ.

ಬಂಧಿತ ಮಹಿಳೆಯನ್ನು ರೊಝಿನಾ(49) ಎಂದು ಗುರುತಿಸಲಾಗಿದೆ. ಇಸ್ಲಾಮಾಬಾದ್‌ನ ಫೆರೋಜ್‌ಬಂದ ಪ್ರದೇಶದ ನಿವಾಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂಂಚ್‌ನ ಚಕ್ರ ದ ಬಾಗ್‌ನಲ್ಲಿ ಎಲ್‌ಒಸಿಯನ್ನು ರೊಝಿನಾ ದಾಟಿ ಬಂದಾಗ ಆಕೆಯನ್ನು ಬಂಧಿಸಲಾಗಿದೆ. ಭಾರತೀಯ ಸೇನೆಯು ಆಕೆಯ ವಿಚಾರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.