ಠಾಣೆ: ಪಾಲ್ಗಾರ್ ಗುಂಪು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ನಾಲ್ವರಿಗೆ ವಿಶೇಷ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಜಿಲ್ಲಾ ನ್ಯಾಯಾಧೀಶ ಪಿ.ಪಿ ಜಾಧವ್ ಜಾಮೀನು ಅರ್ಜಿ ವಿಚಾರಣೆ ನಡೆಸಿದರು. ₹15 ಸಾವಿರ ಮೌಲ್ಯದ ವೈಯಕ್ತಿಕ ಬಾಂಡ್ ಮೇಲೆ ಆರೋಪಿಗಳಿಗೆ ಜಾಮೀನು ನೀಡಲಾಗಿದೆ.
ಈ ಪ್ರಕರಣದಲ್ಲಿ ಈವರೆಗೆ 200 ಮಂದಿಯನ್ನು ಬಂಧಿಸಲಾಗಿದ್ದು, ಇದೇ ಮೊದಲ ಬಾರಿ ಜಾಮೀನು ಮಂಜೂರಾಗಿದೆ. ಲಕ್ಷ್ಮಣ್ ರಾಮಾಜಿ ಜಾಧವ್ (58), ನಿತಿನ್ ಲಕ್ಷ್ಮಣ್ ಜಾಧವ್ (26), ಮನೋಜ್ ಲಕ್ಷ್ಮಣ್ ಜಾಧವ್ (25) ಮತ್ತು ತುಕಾರಾಂ ರೂಪ್ ಜಿ ಸಥ್ (40) ಜಾಮೀನು ಪಡೆದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.