ADVERTISEMENT

ವಕ್ಫ್‌ ಕಾಯ್ದೆ: ನಿಯಮ ರೂಪಿಸಿಲ್ಲ ಏಕೆ? ಅಲ್ಪಸಂಖ್ಯಾತ ಸಚಿವಾಲಯ ‍ಪ್ರಶ್ನೆ

ಪಿಟಿಐ
Published 11 ಸೆಪ್ಟೆಂಬರ್ 2024, 16:19 IST
Last Updated 11 ಸೆಪ್ಟೆಂಬರ್ 2024, 16:19 IST
   

ನವದೆಹಲಿ: ವಕ್ಫ್‌ ಕಾಯ್ದೆ 2013ಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವಲ್ಲಿ ಆಗುತ್ತಿವ ವಿಳಂಬದ ಕುರಿತು ವಿವರಣೆ ನೀಡಿ ಎಂದು ರಾಜ್ಯಸಭೆಯ ಸಂಸದೀಯ ಸಮಿತಿಯು ಬುಧವಾರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಿದೆ.

ಈ ಸಂಬಂಧ ಸಚಿವಾಲಯಕ್ಕೆ ಸಂಸದೀಯ ಸಮಿತಿಯು ನೋಟಿಸ್‌ ಅನ್ನೂ ನೀಡಿದೆ. ಮುಂದಿನ ವಾರದಲ್ಲಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವಾಲಯದ ಪ್ರತಿನಿಧಿಯೊಬ್ಬರು ಸಮಿತಿ ಮುಂದೆ ಹಾಜರಾಗಬೇಕು ಎಂದೂ ಹೇಳಿದೆ. 

ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದ್ದು, ತಿದ್ದುಪಡಿ ಮಸೂದೆಯನ್ನು ಪರಾಮರ್ಶಿಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗಿದೆ. ಈ ವಿಷಯವು ಜಂಟಿ ಸಂಸದೀಯ ಸಮಿತಿಯ ಮುಂದೆ ಇರುವಾಗಲೇ ರಾಜ್ಯಸಭೆಯ ಸಂಸದೀಯ ಸಮಿತಿಯು ಈ ಕ್ರಮ ಕೈಗೊಂಡಿದೆ.

ADVERTISEMENT

ಇದರೊಂದಿಗೆ, 2006ರ ದಂಡು ಪ್ರದೇಶ ಕಾಯ್ದೆಗೆ ನಿಯಮಗಳನ್ನು ರೂಪಿಸುವ ಕಾರ್ಯವನ್ನು ಪೂರ್ಣಗೊಳಿಸಲು ತಡವಾಗುತ್ತಿರುವುದರ ಕುರಿತೂ ರಾಜ್ಯಸಭೆಯ ಸಂಸದೀಯ ಸಮಿತಿಯು ರಕ್ಷಣಾ ಸಚಿವಾಲಯಕ್ಕೆ ನೋಟಿಸ್‌ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.