ADVERTISEMENT

ಉಗ್ರ ಕಸಬ್ ಮೊಬೈಲ್ ಅನ್ನು ನಾಶಪಡಿಸಿದ್ದ ಪರಮ್ ಬೀರ್ ಸಿಂಗ್: ನಿವೃತ್ತ ಅಧಿಕಾರಿ

ಪಿಟಿಐ
Published 25 ನವೆಂಬರ್ 2021, 17:02 IST
Last Updated 25 ನವೆಂಬರ್ 2021, 17:02 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಮುಂಬೈ: ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು 26/11 ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ಬಳಿ ವಶಪಡಿಸಿಕೊಂಡಿದ್ದ ಮೊಬೈಲ್ ಅನ್ನು ನಾಶ ಮಾಡಿದ್ದರು ಎಂದು ನಿವೃತ್ತ ಉಪ ಪೊಲೀಸ್ ಆಯುಕ್ತ ಶಂಶೀರ್ ಖಾನ್ ಪಠಾಣ್ ಆರೋಪಿಸಿದ್ದಾರೆ.

ಈ ಬಗ್ಗೆ ಜುಲೈನಲ್ಲೇ ಮುಂಬೈ ಪೊಲೀಸ್ ಆಯುಕ್ತರಿಗೆ ಪಠಾಣ್, ಲಿಖಿತ ದೂರು ನೀಡಿದ್ದು, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

4 ತಿಂಗಳ ಹಿಂದೆಯೇ ಪಠಾಣ್ ದೂರು ನೀಡಿದ್ದರೂ ಸಹ ಇಂದು ಸುಲಿಗೆ ಪ್ರಕರಣದ ತನಿಖೆಗೆ ಪರಮ್ ಬೀರ್ ಸಿಂಗ್ ಮುಂಬೈ ಪೊಲೀಸರ ಮುಂದೆ ಹಾಜರಾದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಿದಾಡಿದೆ.

ADVERTISEMENT

ಕಸಬ್ ಬಳಿಯಿಂದ ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದಾಗಿ ಅಂದಿನ ಡಿಬಿ ಮಾರ್ಗ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಾಹಿತಿ ನೀಡಿದ್ದರು. ಅದನ್ನು ಕಾಂಬ್ಳೆ ಎಂಬ ಪೊಲೀಸ್ ಪೇದೆಯ ವಶಕ್ಕೆ ನೀಡಲಾಗಿತ್ತು. ಬಳಿಕ, ಪೊಲೀಸ್ ಪೇದೆಯಿಂದ ಮೊಬೈಲ್ ತೆಗೆದುಕೊಂಡ ಅಂದಿನ ಎಟಿಎಸ್ ಡಿಐಜಿ ಪರಮ್ ಬೀರ್ ಸಿಂಗ್, ಅದನ್ನು ತನಿಖಾಧಿಕಾರಿ ರಮೇಶ್ ಮಹಳೆ ಅವರಿಗೆ ನೀಡದೆ ನಾಶ ಮಾಡಿದ್ದರು ಎಂದು ಪಠಾಣ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.