ADVERTISEMENT

ಡಿಸೆಂಬರ್‌ ಎರಡನೇ ವಾರದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ಸಾಧ್ಯತೆ

ಪಿಟಿಐ
Published 8 ನವೆಂಬರ್ 2023, 12:39 IST
Last Updated 8 ನವೆಂಬರ್ 2023, 12:39 IST
<div class="paragraphs"><p>ಸಂಸತ್‌ ಭವನ</p></div>

ಸಂಸತ್‌ ಭವನ

   

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್‌ 2ನೇ ವಾರದಲ್ಲಿ ಆರಂಭವಾಗಿ ಕ್ರಿಸ್‌ಮಸ್‌ ಹೊತ್ತಿಗೆ ಮುಕ್ತಾಯವಾಗುವ ಸಾಧ್ಯತೆ ಇದೆ ಎಂದು ಬುಧವಾರ ಮೂಲಗಳು ತಿಳಿಸಿವೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಡಿ.3ರಂದು ಪ್ರಕಟವಾಗಲಿದ್ದು ಅದರ ಮರುದಿನ ಅಧಿವೇಶನ ಆರಂಭವಾಗುವ ಸಂಭವವಿದೆ.

ADVERTISEMENT

ಈಗಾಗಲೇ ಲೋಕಸಭೆಯಲ್ಲಿ ಇಂಡಿಯನ್ ಪೀನಲ್ ಕೋಡ್ (ಭಾರತೀಯ ದಂಡ ಸಂಹಿತೆ) ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಮಸೂದೆ-2023, ಕ್ರಿಮಿನಲ್ ಪ್ರೊಸೀಜರ್ ಕೋಡ್ (ಅಪರಾಧ ಪ್ರಕ್ರಿಯಾ ಸಂಹಿತೆ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆ-2023 ಮತ್ತು ಇಂಡಿಯನ್ ಎವಿಡನ್ಸ್ ಆ್ಯಕ್ಟ್ (ಭಾರತೀಯ ಸಾಕ್ಷ್ಯ ಕಾಯ್ದೆ) ಬದಲಿಗೆ ಭಾರತೀಯ ಸಾಕ್ಷ್ಯ ಮಸೂದೆ 2023 ಅನ್ನು ಕೇಂದ್ರ ಸಚಿವಾಲಯವು ಮಂಡಿಸಿದೆ. ಇವುಗಳಿಗೆ ಅನುಮೋದನೆ ಪಡೆಯಲು ಅಧಿವೇಶನಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ.

ಸಂಸತ್ತಿನಲ್ಲಿ ಬಾಕಿ ಉಳಿದಿರುವ ಮತ್ತೊಂದು ಪ್ರಮುಖ ಮಸೂದೆ ಎಂದರೆ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದೆ.

ಸಾಮಾನ್ಯವಾಗಿ ಚಳಿಗಾಲದ ಅಧಿವೇಶನ ನವೆಂಬರ್‌ ಮೂರನೇ ವಾರದಲ್ಲಿ ಆರಂಭವಾಗಿ ಡಿಸೆಂಬರ್‌ 25ಕ್ಕೆ ಮುಕ್ತಾಯವಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.