ADVERTISEMENT

ಶಿಕ್ಷಕರ ನೇಮಕಾತಿ ಹಗರಣ: ಮಾಜಿ ಸಚಿವ ಪಾರ್ಥ ಚಟರ್ಜಿಗೆ ಜಾಮೀನು

ಪಿಟಿಐ
Published 26 ಸೆಪ್ಟೆಂಬರ್ 2025, 16:23 IST
Last Updated 26 ಸೆಪ್ಟೆಂಬರ್ 2025, 16:23 IST
ಪಾರ್ಥ ಚಟರ್ಜಿ-ಪಿಟಿಐ ಚಿತ್ರ
ಪಾರ್ಥ ಚಟರ್ಜಿ-ಪಿಟಿಐ ಚಿತ್ರ   

ನವದೆಹಲಿ: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ‌ ಮುಖ್ಯ ಆರೋಪಿ, ಪಶ್ಚಿಮ ಬಂಗಾಳದ ಶಿಕ್ಷಣ ಖಾತೆಯ ಮಾಜಿ ಸಚಿವ, ತೃಣಮೂಲ ಕಾಂಗ್ರೆಸ್‌ ಪಕ್ಷದ ಶಾಸಕ ಪಾರ್ಥ ಚಟರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. 

ಪಾಸ್‌ಪೋರ್ಟ್‌ ಅನ್ನು ಒಪ್ಪಿಸಬೇಕು ಮತ್ತು ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ ತೆರಳದಂತೆ ಷರತ್ತು ವಿಧಿಸಿ ನ್ಯಾಯಮೂರ್ತಿ ಸುರ್ವ ಘೋಷ್‌ ನೇತೃತ್ವದ ನ್ಯಾಯಪೀಠವು ಜಾಮೀನು ಮಂಜೂರು ಮಾಡಿತು.  

ವಿಚಾರಣೆಯ ಬಾಕಿ ಅವಧಿಯವರೆಗೂ ಚಟರ್ಜಿ ಅವರನ್ನು ಯಾವುದೇ ಹುದ್ದೆಗೂ ನೇಮಕಗೊಳಿಸಬಾರದು ಎಂದು ಘೋಷ್‌ ಅವರು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಶಿಕ್ಷಣ ಇಲಾಖೆಯಲ್ಲಿ ಅನರ್ಹ ಅಭ್ಯರ್ಥಿಗಳನ್ನು ಶಿಕ್ಷಕರು ಹಾಗೂ ಇತರೆ ಹುದ್ದೆಗಳಿಗೆ ನೇಮಿಸಿದ ಆರೋಪ ಚಟರ್ಜಿ ಮೇಲಿದೆ. ಭ್ರಷ್ಟಾಚಾರ ಜೊತೆ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪಾರ್ಥ ಚಟರ್ಜಿ ಅವರನ್ನು 2022ರ ಜುಲೈ 23ರಂದು ಇ.ಡಿ ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.