ADVERTISEMENT

ಜೆಟ್‌ ಏರ್‌ವೇಯ್ಸ್‌ನಲ್ಲಿ ತಾಂತ್ರಿಕ ದೋಷ: ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತ

ಏಜೆನ್ಸೀಸ್
Published 20 ಸೆಪ್ಟೆಂಬರ್ 2018, 18:36 IST
Last Updated 20 ಸೆಪ್ಟೆಂಬರ್ 2018, 18:36 IST
   

ಮುಂಬೈ: ಜೆಟ್‌ ಏರ್‌ವೇಯ್ಸ್‌ ಸಿಬ್ಬಂದಿ ವಿಮಾನದೊಳಗಿನ ತಾಂತ್ರಿಕ ದೋಷದ ಕಾರಣ ಪ್ರಯಾಣಿಕರ ಮೂಗು, ಕಿವಿಯಲ್ಲಿ ರಕ್ತ ಸೋರಿಕೆಯಾಗಿದ್ದು, ಇನ್ನು ಕೆಲವರಿಗೆ ತಲೆನೋವು ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಮುಂಬೈಯಿಂದ ಜೈಪುರಕ್ಕೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು,ಪ್ರಯಾಣಿಕರನ್ನು ಮುಂಬೈ ವಿಮಾನ ನಿಲ್ದಾಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವೇಳೆ ಹಾಜರಿದ್ದ ಸಿಬ್ಬಂದಿಯ ವಿರುದ್ಧ ವಿಮಾನ ಅಪಘಾತ ತನಿಖಾ ದಳ (ಎಎಐಬಿ) ತನಿಖೆ ಕೈಗೊಂಡಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಉಪನಿರ್ದೇಶಕ ಜನರಲ್‌ ಲಲಿತ್‌ ಗುಪ್ತಾ ತಿಳಿಸಿದ್ದಾರೆ.

ಘಟನೆ ವಿವರ:
ಜೆಟ್‌ ಏರ್‌ವೇಯ್ಸ್‌ 9W 697 ವಿಮಾನವು ಗುರುವಾರ ಮುಂಬೈಯಿಂದ ಜೈಪುರಕ್ಕೆ ಹೊರಟಿತ್ತು. ಇದರಲ್ಲಿ 166 ಮಂದಿ ಪ್ರಯಾಣಿಕರಿದ್ದರು.

ಈ ವೇಳೆ ವಿಮಾನ ಸಿಬ್ಬಂದಿ ಕ್ಯಾಬಿನ್ ಒತ್ತಡ ನಿರ್ವಹಿಸುವ ಸ್ವಿಚ್ ಹಾಕಲು ಮರೆತಿದ್ದಾರೆ. ಇದರಿಂದ ಆಮ್ಲಜನಕ ಮುಖವಾಡಗಳು ಸಿಗುವಲ್ಲಿ ವಿಳಂಬವಾಗಿದೆ. ಇದರ ಪರಿಣಾಮ 30 ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತ ಕಾಣಿಸಿಕೊಂಡಿದೆ.

ಇನ್ನಷ್ಟು:ಜೆಟ್‌ ಏರ್‌ವೇಸ್‌ ಅವಘಡ; ಗಾಳಿಯ ಒತ್ತಡ ಕಾಯ್ದುಕೊಳ್ಳದಿದ್ದರೆ ಪ್ರಾಣಕ್ಕೇ ಕುತ್ತು

ಈಗಾಗಲೇ ಪರಿಸ್ಥಿತಿ ಸುಧಾರಿಸಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಕಿ, ಮೂಗಿನಲ್ಲಿ ರಕ್ತಸೋರಿಕೆಯಾದವರಿಗೆ ಸಿಬ್ಬಂದಿ ಪ್ರಥಮ ಚಿಕಿತ್ಸೆ ಮಾಡಿದ್ದಾರೆ. ತುರ್ತಾಗಿ ತೆರಳಬೇಕಾದ ಪ್ರಯಾಣಿಕರಿಗೆ ಬೇರೊಂದು ವಿಮಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರಿಗಾದದ ಅನಾನುಕೂಲತೆಗೆ ಜೆಟ್‌ ಏರ್‌ವೇಯ್ಸ್ ಕ್ಷಮೆಯಾಚಿಸುತ್ತದೆ ಎಂದು ಜೆಟ್‌ಏರ್‌ ವೇಯ್ಸ್ ಹೇಳಿಕೆ ಬಿಡುಗಡೆ ಮಾಡಿದೆ.

ಈ ಸಂಬಂಧ ಸತೀಶ್ ನಾಯರ್ ಎಂಬುವರು ಮೂಗಿನಲ್ಲಿ ರಕ್ತಸೋರಿಕೆಯಾದರೂ ವಿಮಾನದ ಸಿಬ್ಬಂದಿ ಸಹಾಯಕ್ಕೆ ಬರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.