ADVERTISEMENT

ಒಡಿಶಾ: ಬಿಜೆಡಿ ಅಧ್ಯಕ್ಷ ಸ್ಥಾನಕ್ಕೆ ಪಟ್ನಾಯಕ್ ನಾಮಪತ್ರ

ಪಿಟಿಐ
Published 17 ಏಪ್ರಿಲ್ 2025, 13:29 IST
Last Updated 17 ಏಪ್ರಿಲ್ 2025, 13:29 IST
ನವೀನ್ ಪಟ್ನಾಯಕ್ 
ನವೀನ್ ಪಟ್ನಾಯಕ್    

ಭುವನೇಶ್ವರ: ಬಿಜೆಡಿ ಅಧ್ಯಕ್ಷ ಸ್ಥಾನಕ್ಕೆ ಒಡಿಶಾ ವಿಧಾನಸಭೆಯ ಪ್ರತಿಪಕ್ಷ ನಾಯಕ ನವೀನ್ ಪಟ್ನಾಯಕ್ ಅವರು ಗುರುವಾರ ನಾಮಪತ್ರ ಸಲ್ಲಿಸಿದರು.

ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಏಕಮಾತ್ರ ಅಭ್ಯರ್ಥಿ ಪಟ್ನಾಯಕ್ ಆಗಿದ್ದು, 1997ರಲ್ಲಿ ಪಕ್ಷ ಆರಂಭವಾದಾಗಿನಿಂದಲೂ ಪಟ್ನಾಯಕ್ ಅವರು 8 ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೀಗ 9ನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. 

ಈ ವೇಳೆ ಮಾತನಾಡಿದ ಅವರು, ‘2000–2024ರ ಬಿಜೆಡಿ ಆಡಳಿತಾವಧಿಯಲ್ಲಿ ಒಡಿಶಾದ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಲಾಗಿದೆ. ಈ ಮೂಲಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಗುರುತಿಸುವಂಥ ಕೆಲಸವನ್ನು ನಮ್ಮ ಸರ್ಕಾರ ಮಾಡಿತ್ತು’ ಎಂದು ಹೇಳಿದರು. 

ADVERTISEMENT

ಅಲ್ಲದೆ, ಆಡಳಿತಾರೂಢ ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.