ADVERTISEMENT

ಜಮ್ಮು–ಕಾಶ್ಮೀರ: ಪಿಡಿಪಿ ಮುಖಂಡ ನಯೀಮ್‌ ಅಖ್ತರ್‌ ಬಿಡುಗಡೆ

ಪಿಟಿಐ
Published 17 ಸೆಪ್ಟೆಂಬರ್ 2020, 14:38 IST
Last Updated 17 ಸೆಪ್ಟೆಂಬರ್ 2020, 14:38 IST
ನಯೀಮ್‌ ಅಖ್ತರ್
ನಯೀಮ್‌ ಅಖ್ತರ್   

ಶ್ರೀನಗರ: ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಗೃಹಬಂಧನದಲ್ಲಿದ್ದ ಪಿಡಿಪಿ ಮುಖಂಡ ನಯೀಮ್‌ ಅಖ್ತರ್‌ ಅವರನ್ನು ಬಿಡುಗಡೆ ಮಾಡಲಾಗಿದೆ.

‘407 ದಿನಗಳ ಬಂಧನದ ನಂತರ ನಾನು ಬಂಧಮುಕ್ತನಾಗಿದ್ದೇನೆ.ನಮ್ಮ ನೆಲದಲ್ಲಿ ದೊಡ್ಡ ದುರಂತವನ್ನೇ ಉಂಟುಮಾಡುತ್ತಿರುವ ಆಡಳಿತಾಧಿಕಾರಿಗಳು ಸಣ್ಣ ಕರುಣೆ ತೋರಿದ್ದಕ್ಕೆ ಧನ್ಯವಾದಗಳು’ ಎಂದು ವ್ಯಂಗ್ಯವಾಗಿ ಅಖ್ತರ್‌ ಅವರು ಗುರುವಾರ ಟ್ವೀಟ್‌ ಮಾಡಿದ್ದಾರೆ.

ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಕಳೆದ ಆಗಸ್ಟ್‌ 5 ರಿಂದ ಅವರನ್ನು ಗೃಹಬಂಧನದಲ್ಲಿರಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.