ಕೋಲ್ಕತ್ತ ಹೈಕೋರ್ಟ್
– ಪಿಟಿಐ ಚಿತ್ರ
ಕೋಲ್ಕತ್ತ: ಪಿಂಚಣಿ ಹಾಗೂ ನಿವೃತ್ತಿ ನಂತರದಲ್ಲಿ ಸಿಗುವ ಇತರೆ ಸೌಲಭ್ಯಗಳು ಒಬ್ಬ ಕಾರ್ಮಿಕನು ಸುದೀರ್ಘ ಸೇವೆ ಸಲ್ಲಿಸಿ ಗಳಿಸಿರುವ ಹಕ್ಕೇ ವಿನಾ ದಾನವಲ್ಲ. ಹೀಗಾಗಿ ನಿವೃತ್ತಿ ನಂತರದ ಸೌಲಭ್ಯಗಳನ್ನು ಒದಗಿಸುವಲ್ಲಿ ಒಂದು ದಿನವೂ ವಿಳಂಬವಾಗಕೂಡದು ಎಂದು ಕೋಲ್ಕತ್ತ ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಗೌರಂಗ್ ಕಾಂತ್ ಅವರು ಮೇ 23ರಂದು ಈ ಆದೇಶ ಹೊರಡಿಸಿ, ನಿವೃತ್ತಿ ನಂತರದಲ್ಲಿ ಸಿಗುವ ಸೌಲಭ್ಯಗಳೇ ನಿವೃತ್ತ ನೌಕರನಿಗೆ ಆಧಾರವಾಗಿರುತ್ತದೆ. ಸೌಲಭ್ಯಗಳು ಸಿಗುವುದು ವಿಳಂಬವಾದರೆ ಅವರಿಗೆ ಕಷ್ಟವಾಗುತ್ತದೆ ಎಂದೂ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಯ ‘ಡಿ’ ದರ್ಜೆಯ ನೌಕರರೊಬ್ಬರು ತಾವು ನಿವೃತ್ತಿ ಹೊಂದಿದ ಬಳಿಕ ಪಿಂಚಣಿ ಬರುತ್ತಿಲ್ಲ ಎಂದು ಕೋರ್ಟ್ ಮೊರೆಹೋಗಿದ್ದರು. ಆ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೇಲ್ಕಂಡ ಆದೇಶ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.