ADVERTISEMENT

ನೆಟ್ ಲೋಕದಲ್ಲಿ ಹಾಸ್ಯಕ್ಕೆ ಗುರಿಯಾದ ಮಹಾರಾಷ್ಟ್ರ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 3:12 IST
Last Updated 13 ನವೆಂಬರ್ 2019, 3:12 IST
ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್
ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್   

ಮುಖ್ಯಮಂತ್ರಿ ಹುದ್ದೆಗಾಗಿಬಿಜೆಪಿ–ಶಿವಸೇನೆ ನಡುವೆ ಸತತ ಜಟಾಪಟಿಯಿಂದ ದೇಶವ್ಯಾಪಿ ಸುದ್ದಿಯಾದ ಮಹಾರಾಷ್ಟ್ರದಲ್ಲಿ ಇದೀಗ ವಿಧಾನಸಭೆ ಅಮಾನತಾಗಿ,ರಾಷ್ಟ್ರಪತಿ ಆಳ್ವಿಕೆ ಆರಂಭವಾಗಿದೆ. ಅಧಿಕಾರಕ್ಕಾಗಿ ವಿವಿಧ ರಾಜಕೀಯ ಪಕ್ಷಗಳ ನಡುವೆಮಹಾಸಮರವೇ ಏರ್ಪಟ್ಟಿರುವಾಗ, ಅಲ್ಲಿನ ಬೆಳವಣಿಗೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಗೆಚಟಾಕಿಗಳು ಹಾರುತ್ತಿವೆ.

ನೆಟ್ಟಿಗರು ಮೀಮ್ಸ್‌ ಮತ್ತು ವಿಡಂಬನಾತ್ಮಕ ಸಂದೇಶಗಳನ್ನು ಹಂಚಿಕೊಳ್ಳುವುದರ ಮೂಲಕ ಮಹಾರಾಷ್ಟ್ರದ ಸ್ಥಿತಿಗತಿಗಳ ಬಗ್ಗೆ ಗೇಲಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಗದ್ದುಗೆ ಏರಲು ರಾಜಕೀಯ ಪಕ್ಷಗಳ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟವನ್ನು ಅಮೆರಿಕಾದ ಪ್ರಸಿದ್ದ ಟಿವಿ ಧಾರಾವಾಹಿ ‘ಗೇಮ್ಸ್‌ ಆಫ್‌ ಥ್ರೋನ್ಸ್‌‘ಗೆ ಹೋಲಿಸುವ ಮೂಲಕ ತಮಾಷೆಯಲ್ಲಿ ಮುಳುಗಿದ್ದಾರೆ.

ಅಕ್ಟೋಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸರಳ ಬಹುಮತ ಸಿಗದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜಕಾರಣ ಹಲವು ತಿರುವುಗಳಿಗೆ ಸಾಕ್ಷಿಯಾಗುತ್ತಿದೆ. ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳೇ ನೆಟ್ಟಿಗರ ಅಪಹಾಸ್ಯಕ್ಕೆ ಗುರಿಯಾಗಿವೆ.

ADVERTISEMENT

ಈ ಮೊದಲು ‘ನಾಯಕ್‌’ ಚಿತ್ರದಲ್ಲಿ ಒಂದು ದಿನದ ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದ ಅನಿಲ್‌ ಕಪೂರ್‌ ಅವರಿಗೆ ರಾಜ್ಯಪಾಲರು ಸಿಎಂ ಸ್ಥಾನ ನೀಡಬೇಕೆಂದು ಹಾಸ್ಯಚಟಾಕೆಗಳು ಹರಿದಾಡಿದ್ದವು. ಆ ನಂತರ #MaharashtraPolitics ಮತ್ತು #MaharashtraPoliticalCrisis ಎಂಬ ಟ್ಯಾಗ್‌ಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯ ಚಿತ್ರ ಮತ್ತು ಟಿವಿ ಶೋಗಳ ಮೀಮ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಮೀಮ್‌ಗಳು ಅಧಿಕಾರಕ್ಕಾಗಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಸಮರಕ್ಕೆ ಸಕಾಲಿಕವಾಗಿದ್ದು, ನಿಮ್ಮನ್ನು ನಗೆಯ ಅಲೆಯಲ್ಲಿ ತೇಲುವಂತೆ ಮಾಡುತ್ತವೆ.

ಇಲ್ಲಿವೆ ಕೆಲ ಹಾಸ್ಯಚಟಾಕಿಗಳು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.