ADVERTISEMENT

ದೆಹಲಿ: ಕೋವಿಡ್‌ ಹೆಚ್ಚಳ, ಮತ್ತೆ ಮುನ್ನಚ್ಚರಿಕೆ ಕ್ರಮಗಳ ಪಾಲಿಸಿ– ವೈದ್ಯರ ಸಲಹೆ

ಪಿಟಿಐ
Published 17 ಏಪ್ರಿಲ್ 2022, 12:37 IST
Last Updated 17 ಏಪ್ರಿಲ್ 2022, 12:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿಯಲ್ಲಿ ಸೋಂಕು ದೃಢ ಪ್ರಮಾಣ ಹೆಚ್ಚಾಗುತ್ತಿದ್ದು, ಕೋವಿಡ್‌ ಪರಿಸ್ಥಿತಿಯಲ್ಲಿ ಅನುಸರಿಸಲಾಗುತ್ತಿದ್ದಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತೆ ಪಾಲಿಸುವಂತೆ ಸಲಹೆ ನೀಡಿರುವ ಇಲ್ಲಿನ ವೈದ್ಯರು, ಲಕ್ಷಣ ಇರುವವರು ತಪ್ಪದೆ ಪರೀಕ್ಷೆಗೆಒಳಗಾಗಬೇಕು ಮತ್ತು ಸರ್ಕಾರ ಮಾಸ್ಕ್‌ ಅನ್ನು ಕಡ್ಡಾಯಗೊಳಿಸಬೇಕು ಎಂದು ಹೇಳಿದ್ದಾರೆ.

ಸೋಂಕಿನ ಲಕ್ಷಣ ಹೊಂದಿರುವವರು ಕೋವಿಡ್‌ ಪತ್ತೆ ಪರೀಕ್ಷೆಗೆ ಒಳಪಡುತ್ತಿಲ್ಲ. ಸೋಂಕು ದೃಢ ಪ್ರಮಾಣಹೆಚ್ಚಿರುವುದರಿಂದ ಸಾರ್ವಜನಿಕರು ಹಾಗೂ ಪ್ರತ್ಯೇಕ ವಾಸಕ್ಕೆಒಳ ಪಡುವವರು ಸ್ವಯಂ ಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರ್ಕಾರ ಗುಂಪು ಸೇರುವವರ ಮೇಲೆ ನಿಗಾ ವಹಿಸಬೇಕು, ಕೋವಿಡ್‌ ಪತ್ತೆ ಪರೀಕ್ಷೆಗಳನ್ನು ಹೆಚ್ಚಿಸಬೇಕು, ಕೋವಿಡ್‌ನ ಎಲ್ಲಾ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕೆಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದಾರೆ. ಹಾಗೆಂದು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುವ ಅಗತ್ಯ ಇಲ್ಲ ಎಂದೂ ಹೇಳಿದ್ದಾರೆ.

ದೆಹಲಿಯಲ್ಲಿ ಕಳೆದೆರಡು ವಾರಗಳಲ್ಲಿ ಶೇ 0.5 ರಷ್ಟಿದ್ದ ಸೋಂಕು ದೃಢ ಪ್ರಮಾಣ ದರ ಶೇ 5.33ಕ್ಕೆ ಜಿಗಿದೆ. ಶನಿವಾರ 461 ಹೊಸಪ್ರಕರಣಗಳೊಂದಿಗೆ ಪಾಸಿಟಿವಿಟಿ ದರ ಶೇ 5.33 ರಷ್ಟು ದಾಖಲಾಗಿದೆ. ಫೆಬ್ರುವರಿಯಲ್ಲಿ ಶೇ 5.09 ಮತ್ತು ಜನವರಿಯಲ್ಲಿ ಶೇ 6.2ರಷ್ಟಿತ್ತು. ದೆಹಲಿ ಸರ್ಕಾರ ಮಾಸ್ಕ್‌ ಧರಿಸದವರಿಗೆ ವಿಧಿಸಲಾಗುತ್ತಿದ್ದ ದಂಡವನ್ನು ಏಪ್ರಿಲ್‌ 2ರಿಂದ ಸ್ಥಗಿತಗೊಳಿಸಿದೆ. ಇದುವರೆಗೆದೆಹಲಿಯಲ್ಲಿ 18,68,033 ಪ್ರಕರಣಗಳು ವರದಿಯಾಗಿವೆ. 26,160 ಸೋಂಕಿತರು ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.