ADVERTISEMENT

ರಾಜ್ಯಪಾಲರ ಪಾದ ಮುಟ್ಟಿ ನಮಸ್ಕರಿಸಿ ಬೀಳ್ಕೊಡುಗೆ ನೀಡಿದ ಆಂಧ್ರ ಸಿಎಂ ಜಗನ್‌

ಪಿಟಿಐ
Published 22 ಫೆಬ್ರುವರಿ 2023, 15:10 IST
Last Updated 22 ಫೆಬ್ರುವರಿ 2023, 15:10 IST
1
1   

ವಿಜಯವಾಡ: ಛತ್ತೀಸ್‌ಗಢಕ್ಕೆ ರಾಜ್ಯಪಾಲರಾಗಿ ನಿಯೋಜನೆಗೊಂಡಿರುವ ರಾಜ್ಯಪಾಲ ಬಿಸ್ವಭೂಷಣ್‌ ಹರಿಚಂದನ್‌ ಅವರಿಗೆ ಇಲ್ಲಿನ ಗನ್ನವರಂ ವಿಮಾನ ನಿಲ್ದಾಣದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಬುಧವಾರ ಖುದ್ದು ಹಾಜರಾಗಿ ಬೀಳ್ಕೊಡುಗೆ ನೀಡುವ ಮೂಲಕ ಗೌರವ ಸಲ್ಲಿಸಿದರು.

ವಿಮಾನ ನಿಲ್ದಾಣದಲ್ಲಿ ಹರಿಚಂದನ್‌ ಅವರ ಪಾದ ಮುಟ್ಟಿ ನಮಸ್ಕರಿಸಿದರು. ಈ ಸಂದರ್ಭದಲ್ಲಿ ಸಿಎಂ ಪತ್ನಿ ವೈ.ಎಸ್‌.ಭಾರತಿ, ಗೃಹ ಸಚಿವ ಜೋಗಿ ರಮೇಶ್‌ ಮತ್ತಿತರರು ಇದ್ದರು.

ಮಂಗಳವಾರ ರಾತ್ರಿ ನಡೆದ ಅಧಿಕೃತ ಬೀಳ್ಕೊಡುಗೆ ಸಂದರ್ಭದಲ್ಲಿ ವಿದಾಯ ಹೇಳಿದ ಸಿಎಂ ಜಗನ್‌, ‘ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಬಂಧಗಳು ವಿವಾದಗಳಿಂದ ಹಾಳಾಗಿದ್ದ ಸಮಯದಲ್ಲಿ, ಹರಿಚಂದನ್ ಅವರು ವಿವಿಧ ಸಾಂವಿಧಾನಿಕ ಸಂಸ್ಥೆಗಳ ನಡುವೆ ಅತ್ಯಂತ ಸಮನ್ವಯತೆಯನ್ನು ಸಾಧಿಸುವ ಮೂಲಕ ರಾಜ್ಯಪಾಲರ ಹುದ್ದೆಗೆ ಹೆಚ್ಚಿನ ಘನತೆಯನ್ನು ತಂದರು’ ಎಂದು ಸ್ಮರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.