ADVERTISEMENT

ಕೋಳಿ ಮರಿ ಉಳಿಸಲು ಆಸ್ಪತ್ರೆಗೆ ಓಡಿದ ಪುಟಾಣಿಗೆ ಪೇಟಾ ಪ್ರಶಸ್ತಿ

ಏಜೆನ್ಸೀಸ್
Published 28 ಏಪ್ರಿಲ್ 2019, 12:45 IST
Last Updated 28 ಏಪ್ರಿಲ್ 2019, 12:45 IST
   

ಮಿಜೋರಾಂ: ಒಂದು ಕೈಯಲ್ಲಿ ಕೋಳಿ ಮರಿ, ಮತ್ತೊಂದು ಕೈಯಲ್ಲಿ ₹10 ಹಿಡಿದು ಆಸ್ಪತ್ರೆಗೆ ಓಡಿದ್ದಮಿಜೋರಾಂನ ಬಾಲಕನ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿವೈರಲ್ ಆಗಿತ್ತು.ಈ ಬಾಲಕನಿಗೆ ಪ್ರಾಣಿ ದಯಾಸಂಘ ಪೇಟಾ‘ಕಂಪ್ಯಾಷನೇಟ್‌ಕಿಡ್‌’ ಗೌರವವನ್ನು ನೀಡಿದೆ.

ಅಚಾನಕ್‌ ಅಡ್ಡ ಬಂದ ಕೋಳಿ ಮರಿಯ ಮೇಲೆ ಚಕ್ರ ಹತ್ತಿಸಿಬಿಟ್ಟ. ಗೊತ್ತಿಲ್ಲದಂತೆ ಆದ ಅನಾಹುತವನ್ನು ಕಂಡು ಗಾಬರಿಯಾದ ಪುಟಾಣಿ ‘ಕೋಳಿ ಮರಿಗೆ ಗಾಯ ಮಾಡಿಬಿಟ್ಟೆ’ ಎಂದು ಪೇಚಾಡುತ್ತ,ಸತ್ತ ಕೋಳಿಯ ಮರಿಯನ್ನುಹಿಡಿದುಕೊಂಡು ಆಸ್ಪತ್ರೆಗೆ ಹೋಗಿ ₹10 ತೋರಿಸಿ ಬದುಕಿಸಿ ಕೊಡುವಂತೆಕೇಳಿ ಕೊಂಡಿದ್ದ. ಅದೇ ಬಾಲಕನಿಗೆಪೇಟಾ ‘ಕಾಳಜಿಯುಳ್ಳ ಪುಟಾಣಿ’ ಎಂದು ಕರೆದಿದೆ.

‘ಪ್ರಾಣಿಗಳ ಮೇಲೆಕರುಣೆ, ಕಾಳಜಿ ವ್ಯಕ್ತವಾಗುವುದುಸಮಾಜದಲ್ಲಿ ಕ್ರೌರ್ಯಮನೋಭಾವವನ್ನು ಹಿಮ್ಮೆಟ್ಟಿಸಲು ಮೊದಲ ಹೆಜ್ಜೆ.ಬಾಲಕ ಸಣ್ಣ ವಯಸ್ಸಿನಲ್ಲಿ ಇದನ್ನು ತಿಳಿದು ಕೊಂಡಿದ್ದಾನೆ. ಪ್ರಾಣಿಗಳೊಂದಿಗೆ ಜಗತ್ತನ್ನು ಹಂಚಿಕೊಂಡು ಬದುಕುತ್ತಿರುವ ನಮಗೂ ಅವುಗಳಿಗೂ ಪರಿಸರದ ದೃಷ್ಟಿಯಲ್ಲಿ ವ್ಯತ್ಯಾಸವಿಲ್ಲ’ ಎಂದು ಪೇಟಾ ಹೇಳಿಕೆನೀಡಿದೆ.

ತನ್ನ ಬೈಸಿಕಲ್‌ ಹರಿದು ಚಲನೆಯನ್ನೇ ನಿಲ್ಲಿಸಿಕೊಂಡ ಕೋಳಿ ಮರಿಯನ್ನು ಹೊತ್ತು ಮನೆಯೊಳಗೆ ಬಂದಿದ್ದ ಪುಟಾಣಿಗೆ ಆ ಮರಿ ಬದುಕಿಲ್ಲ ಎಂಬ ಅರಿವು ಇರಲಿಲ್ಲ. ‘ಆಸ್ಪತ್ರೆಗೆ ಹೋಗೋಣ ಬನ್ನಿ..ಬನ್ನಿ...’ ಎಂದು ಅಪ್ಪ–ಅಮ್ಮನ ಮುಂದೆ ಗೋಗರೆಯುತ್ತಿದ್ದ. ಪಾಲಕರು ಎಷ್ಟೇ ಸಂತೈಸಿದರೂ ಕೇಳದ ಪುಟಾಣಿಗೆ ಅವನ ತಂದೆ, ‘ಸರಿ, ನೀನೇ ಆಸ್ಪತ್ರೆಗೆ ತೆಗೆದುಕೊಂಡು ಹೋಗು’ ಎಂದುಬಿಟ್ಟರು. ಸಿಕ್ಕಲ್ಲೆಲ್ಲ ಹುಡುಕಾಡಿ ₹10 ತೆಗೆದುಕೊಂಡು, ಕೋಳಿ ಮರಿಯನ್ನೂ ಭದ್ರವಾಗಿ ಹಿಡಿದು ಆಸ್ಪತ್ರೆಗೆ ಹೊರಟೇ ಬಿಟ್ಟ.

ಆಸ್ಪತ್ರೆಯಲ್ಲಿ ಪುಟಾಣಿ ಓಡಾಡುತ್ತಿದ್ದ. ಬಾಲಕ ಮುಗ್ದತೆ,ಮಾನವಿಯತೆಯನ್ನು ಕಂಡು ನರ್ಸ್‌ ಒಬ್ಬರುಕ್ಲಿಕ್ಕಿಸಿದ ಫೋಟೊಎಲ್ಲೆಡೆ ಹಂಚಿಕೆಯಾಗಿರುವುದು. ಕೋಳಿ ಮರಿಗೆ ಚಿಕಿತ್ಸೆ ಸಿಗದೆ ಬಿಕ್ಕಿಬಿಕ್ಕಿ ಅಳುತ್ತಲೇ ಆಸ್ಪತ್ರೆಯಿಂದ ಮನೆಗೆ ಬಂದ ಪುಟಾಣಿ, ಹೇಗಾದರೂ ಮಾಡಿ ಅದನ್ನು ಗುಣಪಡಿಸಲೇಬೇಕು ಎಂದು ತೀರ್ಮಾನಿಸಿದ್ದ.

ಅಂತಿಮವಾಗಿ ಪಾಲಕರಿಗೆ ಸತ್ಯ ಹೇಳದೆ ಬೇರೆ ವಿಧಿಯಿಲ್ಲ. ‘ಕೋಳಿ ಮರಿ ಈಗ ಬದುಕಿಲ್ಲ, ಆಸ್ಪತ್ರೆಯಲ್ಲಿ ಯಾರೂ ಏನೂ ಮಾಡಲು ಆಗುವುದಿಲ್ಲ. ಅದು ಸತ್ತು ಹೋಗಿದೆ’ ಎಂದು ಪುಟಾಣಿಗೆ ನಿಧಾನವಾಗಿ ವಿವರಿಸಲು ಪ್ರಯತ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.