ADVERTISEMENT

ಬೀಗ ತೆರವು ಕೋರಿ ಹೈಕೋರ್ಟ್‌ಗೆ ಮೊರೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 18:22 IST
Last Updated 12 ಜುಲೈ 2022, 18:22 IST

ಚೆನ್ನೈ (ಪಿಟಿಐ): ಎಐಎಡಿಎಂಕೆ ಮುಖ್ಯ ಕಚೇರಿಗೆ ಬೀಗ ಹಾಕಿರುವುದನ್ನು ಪ್ರಶ್ನಿಸಿ ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿ ಇ. ಪಳನಿಸ್ವಾಮಿ ಹಾಗೂ ಉಚ್ಚಾಟಿತ ನಾಯಕ ಒ. ಪನ್ನೀರಸೆಲ್ವಂ ಅವರು ಮಂಗಳವಾರ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಹಿಂಸಾಚಾರದ ಕಾರಣಕ್ಕೆ ಕಂದಾಯ ಅಧಿಕಾರಿಗಳು ಕಚೇರಿಗೆ ಬೀಗ ಹಾಕಿದ್ದರು. ಈ ಅರ್ಜಿಗಳು ಬುಧವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಸೋಮವಾರ ನಡೆದ ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಹಾಗೂ ಬದಲಾ
ವಣೆಗಳ ಬಗ್ಗೆ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿ ಪಳನಿಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ಆಯೋಗಕ್ಕೆ ಪತ್ರ ಬರೆದಿರುವ ಪನ್ನೀರಸೆಲ್ವಂ, ಜನರಲ್ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಡ ತೀರ್ಮಾನಗಳು ಕಾನೂನುಬಾಹಿರ ಎಂದು ಪ್ರತಿಪಾದಿಸಿದ್ದಾರೆ.

ಪಕ್ಷಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ವಿಧಾನಸಭೆ ಸಚಿವಾಲಯಕ್ಕೆ ಪನ್ನೀರಸೆಲ್ವಂ ಮನವಿ ಸಲ್ಲಿಸಿದ್ದಾರೆ. ಪಳನಿಸ್ವಾಮಿ ಅವರು ಪ್ರತಿಪಕ್ಷದ ನಾಯಕರಾಗಿದ್ದು, ಪನ್ನೀರಸೆಲ್ವಂ ಅವರು ಉಪನಾಯಕರಾಗಿದ್ದಾರೆ. ತಾವು ಪಕ್ಷದ ಖಜಾಂಚಿಯಾಗಿದ್ದು, ತಮ್ಮ ಅನುಮತಿಯಿಲ್ಲದೇ ವಹಿವಾಟು ನಡೆಸಬಾರದು ಎಂದು ಪನ್ನೀರಸೆಲ್ವಂ ಅವರು ಬ್ಯಾಂಕ್‌ಗಳಿಗೆ ಸೂಚಿಸಿದ್ದಾರೆ. ದಿಂಡಿಗಲ್ ಸಿ. ಶ್ರೀನಿವಾಸನ್ ಅವರು ಪಕ್ಷದ ಹೊಸ ಖಜಾಂಚಿಯಾಗಿದ್ದಾರೆ ಎಂದು ಪಳನಿಸ್ವಾಮಿ ಅವರು ಬ್ಯಾಂಕ್‌ಗಳಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.