ಮುಜಪ್ಫರ್‌ನಗರ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಹತ್ಯೆಗೆ ಸಂಚು ರೂಪಿಸಿದ ಖಲಿಸ್ತಾನ್ ಲಿಬರೇಷನ್ ಫ್ರಂಟ್‌ನ ಮೂವರು ಉಗ್ರರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 2ರಂದು ಶಾಮ್ಲಿ ಜಿಲ್ಲೆಯ ಕಮಲಾಪುರ್ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರಿಂದ ಎರಡು ಬಂದೂಕುಗಳನ್ನು ಬಂಧಿತರು ದೋಚಿದ್ದರು. ಭಾನುವಾರ (ಅಕ್ಟೋಬರ್ 14) ಇವರನ್ನು ಬಂಧಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬಾದಲ್ ಅವರ ಹತ್ಯೆಯ ಸಂಚಿನ ಬಗ್ಗೆ ಸುಳಿವು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.