ADVERTISEMENT

‘ರಾಜ್ಯದಲ್ಲಿ ಕನಿಷ್ಠ ಒಂದು ಸೌರಶಕ್ತಿ ನಗರವಿರಲಿ’

​ಪ್ರಜಾವಾಣಿ ವಾರ್ತೆ
Published 28 ಮೇ 2020, 19:45 IST
Last Updated 28 ಮೇ 2020, 19:45 IST
ನರೇಂದ್ರ ಮೋದಿ 
ನರೇಂದ್ರ ಮೋದಿ    

ನವದೆಹಲಿ: ಪ್ರತಿ ರಾಜ್ಯದಲ್ಲಿ ಕನಿಷ್ಠ ಒಂದು ‘ಸೌರಶಕ್ತಿ ನಗರ’ ಇರಬೇಕು ಎನ್ನುವ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.

ಗುರುವಾರ ಇಂಧನ ಹಾಗೂ ನವೀಕರಿಸಬಹುದಾದ ಇಂಧನ ಇಲಾಖೆಯ ಪ್ರಗತಿಪರಿಶೀಲನೆ ನಡೆಸಿದ ಮೋದಿ, ‘ಪ್ರತಿ ರಾಜ್ಯದಲ್ಲಿ ಒಂದುನಗರವಾದರೂ ಸಂಪೂರ್ಣ ಸೌರಶಕ್ತಿಯ ಮೂಲಕ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನುಹೊಂದಿರಬೇಕು. ಇದು ರಾಜಧಾನಿಯಾಗಿರಬಹುದು ಅಥವಾ ಖ್ಯಾತ ಪ್ರವಾಸಿ ನಗರವಾಗಿರಬಹುದು. ಈ ನಗರದ ಮನೆಗಳು, ಕಟ್ಟಡಗಳ ಮೇಲ್ಛಾವಣಿಗಳಲ್ಲಿ ಸೋಲಾರ್‌ ಪ್ಯಾನಲ್‌ಗಳನ್ನು ಅಳವಡಿಸಿಕೊಂಡು ವಿದ್ಯುತ್‌ ಉತ್ಪಾದನೆ ಮಾಡಬೇಕು’ಎಂದು ಸಲಹೆ ನೀಡಿದ್ದಾರೆ.

ಇಂಧನ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳು, ಅದರಲ್ಲೂ ಪ್ರಮುಖವಾಗಿ ವಿದ್ಯುತ್‌ ಸರಬರಾಜು ವಿಭಾಗದಲ್ಲಿನ ಸಮಸ್ಯೆಗಳ ಕುರಿತು ಗಮನಹರಿಸಿದ ಪ್ರಧಾನಿ ಅವರು,ವಿದ್ಯುತ್‌ ಸರಬರಾಜು ಮಾಡುವ ಕಂಪನಿಗಳು ತಮ್ಮ ಸಾಧನೆಗಳನ್ನು ಪ್ರಕಟಿಸಿ, ಜನರಿಗೆ ಮಾಹಿತಿ ನೀಡುತ್ತಿರಬೇಕು.ಆಯಾ ರಾಜ್ಯಗಳ ಸಾಧನೆಗಳನ್ನು ಮತ್ತಷ್ಟು ಸುಧಾರಿಸಲು ಪ್ರೋತ್ಸಾಹ ನೀಡಲು ಸೂಚಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.