ADVERTISEMENT

ಇ–ಮಾರ್ಕೆಟ್‌ಪ್ಲೇಸ್‌ ಖರೀದಿ ಸಾಧನೆ: ಪ್ರಧಾನಿ ಶ್ಲಾಘನೆ

ಪಿಟಿಐ
Published 24 ಮಾರ್ಚ್ 2022, 13:34 IST
Last Updated 24 ಮಾರ್ಚ್ 2022, 13:34 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಕೇಂದ್ರ ಸರ್ಕಾರದ ಆನ್‌ಲೈನ್ ಖರೀದಿ ವೇದಿಕೆಯಾಗಿರುವ ‘ಇ–ಮಾರ್ಕೆಟ್‌ಪ್ಲೇಸ್‌’ ಒಂದೇ ವರ್ಷದಲ್ಲಿ ₹ 1 ಲಕ್ಷ ಕೋಟಿ ಮೊತ್ತದ ಪರಿಕರ ಖರೀದಿ ಸಾಧನೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳಿಗೆ ಅಗತ್ಯವಿರುವ ಪರಿಕರಗಳನ್ನು ಆನ್‌ಲೈನ್ ಮೂಲಕ ಖರೀದಿಸಲು ‘ಇ–ಮಾರ್ಕೆಟ್‌ಪ್ಲೇಸ್‌’ಗೆ 2016ರ ಆಗಸ್ಟ್‌ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು.

ಈ ಪೋರ್ಟಲ್‌ನಲ್ಲಿ ₹ 1 ಲಕ್ಷ ಕೋಟಿ ಮೊತ್ತದ ಖರೀದಿ ವಹಿವಾಟು ನಡೆದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಗಣನೀಯ ಏರಿಕೆಯಾಗಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಶೇ 57ರಷ್ಟು ಖರೀದಿ ಸಣ್ಣ, ಅತಿ ಸಣ್ಣ ಉದ್ದಿಮೆಗಳಿಂದ ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.