ADVERTISEMENT

ಟ್ರಿನಿಡಾಡ್‌–ಟೊಬಾಗೋ ಜೊತೆ ಬಿಹಾರದ ನಂಟು ಕುರಿತು ಪ್ರಶಂಸಿಸಿದ ಪ್ರಧಾನಿ ಮೋದಿ

ಪಿಟಿಐ
Published 4 ಜುಲೈ 2025, 15:03 IST
Last Updated 4 ಜುಲೈ 2025, 15:03 IST
<div class="paragraphs"><p>ಟ್ರಿನಿಡಾಡ್‌–ಟೊಬಾಗೋ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಲ್ಲಿನ ಪ್ರಧಾನಿ&nbsp;ಕಮಲಾ ಪೆಸ್ರಾದ್‌ ಬಿಸ್ಸೆಸ್ಸರ್‌ ಆಯೋಜಿಸಿದ್ದ ಔತಣಕೂಟದ ವೇಳೆ ಸೊಹರಿ ಎಲೆಯಲ್ಲಿ ಉಪಾಹಾರ ಸವಿದರು</p></div>

ಟ್ರಿನಿಡಾಡ್‌–ಟೊಬಾಗೋ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಲ್ಲಿನ ಪ್ರಧಾನಿ ಕಮಲಾ ಪೆಸ್ರಾದ್‌ ಬಿಸ್ಸೆಸ್ಸರ್‌ ಆಯೋಜಿಸಿದ್ದ ಔತಣಕೂಟದ ವೇಳೆ ಸೊಹರಿ ಎಲೆಯಲ್ಲಿ ಉಪಾಹಾರ ಸವಿದರು

   

–ಪಿಟಿಐ ಚಿತ್ರ

ಪೋರ್ಟ್‌ ಆಫ್‌ ಸ್ಪೇನ್‌: ‘ಟ್ರಿನಿಡಾಡ್‌–ಟೊಬಾಗೋ ದೇಶದ ಜೊತೆ ಬಿಹಾರದ ನಂಟಿನ ಕುರಿತು ಪ್ರಶಂಸಿಸಿದ ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಪರಂಪರೆಯು ಭಾರತ ಹಾಗೂ ಇಡೀ ವಿಶ್ವದ ಹೆಮ್ಮೆಯಾಗಿದೆ’ ಎಂದು ತಿಳಿಸಿದರು.

ADVERTISEMENT

ಕೊವ್ವಾದ ರಾಷ್ಟ್ರೀಯ ಸೈಕ್ಲಿಂಗ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಲ್ಲಿ ಭಾಗಿಯಾಗಿರುವ ಹಲವರ ಪೂರ್ವಜರು ಬಿಹಾರದಿಂದಲೇ ಬಂದಿದ್ದಾರೆ. ಬಿಹಾರದ ಪರಂಪರೆಯು ಇಡೀ ದೇಶ ಮಾತ್ರವಲ್ಲದೇ, ವಿಶ್ವಕ್ಕೇ ಹೆಮ್ಮೆಯಾಗಿದೆ’ ಎಂದರು.

‘ಟ್ರಿನಿಡಾಡ್‌–ಟೊಬಾಗೋದ ಪ್ರಧಾನಿ ಕಮಲಾ ಪೆಸ್ರಾದ್‌ ಬಿಸ್ಸೆಸ್ಸರ್‌ ಅವರ ಪೂರ್ವಜರು ಬಿಹಾರದವರೇ ಆಗಿದ್ದು, ಅವರನ್ನು ಇಡೀ ಭಾರತವೇ ‘ಬಿಹಾರದ ಮಗಳು’ ಎಂದು ಹೇಳಲು ಹೆಮ್ಮೆಪಡುತ್ತದೆ’ ಎಂದು ನೆನಪಿಸಿಕೊಂಡರು.

‘ಎರಡು ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಂಬಂಧ ಹಾಗೂ ಬಿಹಾರದ ಪ್ರಮುಖ ಭಾಷೆಯಾದ ಭೋಜ್‌ಪುರಿ ಭಾಷೆಯನ್ನು ಕೆರೆಬಿಯನ್‌ ದೇಶದಲ್ಲಿ ನೆಲಸಿರುವ ಭಾರತೀಯ ಸಮುದಾಯವರು ಹೆಚ್ಚಾಗಿ ಬಳಸುತ್ತಾರೆ’ ಎಂದು ಪ್ರಧಾನಿ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಪ್ರಜಾಪ್ರಭುತ್ವ ಇರಲಿ, ರಾಜಕೀಯ, ರಾಜತಾಂತ್ರಿಕತೆ, ಉನ್ನತ ಶಿಕ್ಷಣದ ವಿಚಾರವೇ ಇರಲಿ; ಬಿಹಾರವು ಶತಮಾನಗಳ ಹಿಂದೆಯೇ ಇಡೀ ವಿಶ್ವಕ್ಕೆ ಹೊಸ ದಿಕ್ಕು ನೀಡಿತ್ತು. ಹೊಸ ಸ್ಫೂರ್ತಿಗಳು ಹಾಗೂ ಹೊಸ ಅವಕಾಶಗಳು 21ನೇ ಶತಮಾನದಲ್ಲಿಯೇ ಬಿಹಾರದಲ್ಲಿ ಸೃಷ್ಟಿಯಾಗುತ್ತಿವೆ’ ಎಂದು ವಿವರಿಸಿದ್ದಾರೆ.

‘ಗಿರ್‌ಮಿಟಿಯಾ ಸಮುದಾಯಗಳ ಸಮಗ್ರ ದತ್ತಾಂಶಗಳ ಸಂಗ್ರಹ ನಿಟ್ಟಿನಲ್ಲಿ ಭಾರತವು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಇದರಿಂದ ಟ್ರಿನಿಡಾಡ್– ಟೊಬಾಗೋ ದೇಶದ ಸಹೋದರ– ಸಹೋದರಿಯರ ಜೊತೆಗೆ ಭಾರತದ ಐತಿಹಾಸಿಕ ಸಂಬಂಧವನ್ನು ಮುಂದುವರಿಸಲು ನೆರವಾಗಲಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಬ್ರಿಟಿಷ್‌ ಆಡಳಿತದ ಅವಧಿಯಲ್ಲಿ ಉತ್ತರ ಪ್ರದೇಶ, ಬಿಹಾರದಿಂದ ನೂರಾರು ಕಾರ್ಮಿಕರು ಆಫ್ರಿಕಾ ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ, ಫಿಜಿ, ಮಾರಿಷಸ್ ಹಾಗೂ ಕೆರಿಬಿಯನ್‌ ದೇಶಗಳ ತೋಟಗಳಲ್ಲಿ ಕೆಲಸ ಮಾಡಲು ಹೋಗಿ ಅಲ್ಲಿಯೇ ನೆಲಸಿದ್ದರು.

ಆಕಾಶದಷ್ಟು ಅವಕಾಶ: ‘ಭಾರತವು ಶೀಘ್ರದಲ್ಲಿ ವಿಶ್ವದ ಮೂರು ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಲಿದೆ. ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌, ಕ್ವಾಟಂ ಎಂಜಿನಿಯರ್‌ ಕ್ಷೇತ್ರವು ದೇಶದ ಅಭಿವೃದ್ಧಿಯ ಪ್ರಮುಖ ಎಂಜಿನ್‌ ಆಗಿರಲಿದೆ’ ಎಂದು ಪ್ರಧಾನಿ ಮೋದಿ ತಿಳಿಸಿದರು.

ಕೊವ್ವಾದ ರಾಷ್ಟ್ರೀಯ ಸೈಕ್ಲಿಂಗ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಭಾರತೀಯ ಸಮುದಾಯದತ್ತ ಕೈ ಬೀಸಿದ ಪ್ರಧಾನಿ ನರೇಂದ್ರ ಮೋದಿ–

ಭಾರತವು ಹಲವು ಅವಕಾಶಗಳ ತಾಣವಾಗಿದ್ದು, ಅಭಿವೃದ್ಧಿಯ ಫಲವು ಅಗತ್ಯವಿರುವವರಿಗೂ ತಲುಪುತ್ತಿದೆ. ಹೊಸ ಭಾರತಲ್ಲಿ ಅವಕಾಶ ಆಕಾಶದಷ್ಟಿದೆ’ ಎಂದು ತಿಳಿಸಿದರು.

ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಪ್ರವಾಸದ ಎರಡನೇ ರಾಷ್ಟ್ರದ ಭೇಟಿಯಾಗಿ ಇಲ್ಲಿಗೆ ಬಂದಿಳಿದ್ದಾರೆ. 1999ರ ಬಳಿಕ ಕೆರೆಬಿಯನ್‌ ದ್ವೀಪರಾಷ್ಟ್ರಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ.

ಟ್ರಿನಿಡಾಡ್‌–ಟೊಬಾಗೋ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಲ್ಲಿನ ಪ್ರಧಾನಿ ಕಮಲಾ ಪೆಸ್ರಾದ್‌ ಬಿಸ್ಸೆಸ್ಸರ್‌ ಅವರಿಗೆ ಮಹಾಕುಂಭಮೇಳದ ಗಂಗಾಜಲ ರಾಮಮಂದಿರ ಬೆಳ್ಳಿ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು–ಪಿಟಿಐ ಚಿತ್ರ
ಸೊಹರಿ ಎಲೆಯಲ್ಲಿ ಉಪಾಹಾರ ಗಂಗಾಜಲ ಉಡುಗೊರೆ
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಲ್ಲಿನ ಪ್ರಧಾನಿ ಕಮಲಾ ಕಮಲಾ ಪೆಸ್ರಾದ್‌ ಬಿಸ್ಸೆಸ್ಸರ್‌ ಅವರು ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಸೊಹರಿ ಎಲೆಯಲ್ಲಿ ಉಪಾಹಾರ ಸೇವಿಸಿದರು. ‘ಇದು ಸಾಂಸ್ಕೃತಿಕವಾಗಿ ಮಹತ್ವವಾಗಿದ್ದು ಭಾರತೀಯರಿಗೆ ಇಷ್ಟವಾಗುತ್ತದೆ. ಯಾವುದೇ ವಿಶೇಷ ಸಂದರ್ಭದಲ್ಲಿ ಎಲೆಯಲ್ಲಿ ಆಹಾರ ಸೇವಿಸಲಾಗುತ್ತದೆ’ ಎಂದು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಭೋಜ್‌ಪುರಿ ಶೈಲಿಯಲ್ಲಿ ಕಲಾವಿದರು ಸ್ವಾಗತಿಸಿದರು. ಈ ವೇಳೆ ಪ್ರಧಾನಿ ಕಮಲಾ ಅವರಿಗೆ ಮಹಾಕುಂಭಮೇಳದ ಗಂಗಾಜಲ ಹಾಗೂ ಅಯೋಧ್ಯೆ ರಾಮಮಂದಿರದ ಬೆಳ್ಳಿ ಪ್ರತಿಕೃತಿಯನ್ನು ಮೋದಿ ಅವರು ಉಡುಗೊರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.