ADVERTISEMENT

ಜಯಲಲಿತಾ 73ನೇ ಜನ್ಮದಿನ: ಗೌರವ ಸಲ್ಲಿಸಿದ ಮೋದಿ, ಶಶಿಕಲಾ, ಎಐಎಡಿಎಂಕೆ ನಾಯಕರು

ಪಿಟಿಐ
Published 24 ಫೆಬ್ರುವರಿ 2021, 9:24 IST
Last Updated 24 ಫೆಬ್ರುವರಿ 2021, 9:24 IST
ಜಯಲಲಿತಾ
ಜಯಲಲಿತಾ   

ಚೆನ್ನೈ: ಎಐಎಡಿಎಂಕೆ ಪಕ್ಷದ ಮಾಜಿ ನಾಯಕಿ ದಿವಂಗತ ಜೆ.ಜಯಲಲಿತಾ ಅವರ 73 ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ ಮೂಲಕ ಗೌರವ ಸಲ್ಲಿಸಿದ್ದಾರೆ.

‘ಜನಪರ ನೀತಿಗಳು ಮತ್ತು ದೀನ ದಲಿತರನ್ನು ಸಬಲೀಕರಿಸುವ ಪ್ರಯತ್ನಗಳ ಮೂಲಕ ಜಯಲಲಿತಾ ಅವರು ವ್ಯಾಪಕವಾಗಿ ಜನಮೆಚ್ಚುಗೆ ಪಡೆದಿದ್ದರು. ನಮ್ಮ ನಾರಿ ಶಕ್ತಿಯನ್ನು ಸಶಕ್ತಗೊಳಿಸುವ ಅವರು ಪ್ರಯತ್ನಗಳು ಗಮನಾರ್ಹವಾದುದು. ಅವರೊಂದಿಗೆ ನಡೆಸಿದ ಹಲವು ಚರ್ಚೆಗಳನ್ನೂ ಸದಾ ನೆನಪಿಸಿಕೊಳ್ಳುತ್ತೇನೆ‘ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಒ ಪನ್ನೀರಸೆಲ್ವಂ ಮತ್ತು ಆಡಳಿತರೂಢ ಪಕ್ಷದ ಇತರ ನಾಯಕರು ನಗರದಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲರುವ ಜಯಲಲಿತಾ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ADVERTISEMENT

ಎಐಎಡಿಎಂಕೆ ಪಕ್ಷ ರಾಜ್ಯದಾದ್ಯಂತ ಆರೋಗ್ಯ ಶಿಬಿರ ಸೇರಿದಂತೆ ಹಲವು ಜನಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಯಲಲಿತಾ ಅವರ 73ನೇ ಜನ್ಮದಿನವನ್ನು ಆಚರಿಸಿದೆ.

ವಿ ಕೆ ಶಶಿಕಲಾ, ಅಮ್ಮ ಮಕ್ಕಳ್‌ ಮುನ್ನೇತ್ರ ಕಜಗಂ ನಾಯಕ ಟಿ ಟಿ ದಿನಕರನ್ ಮತ್ತಿತರ ನಾಯಕರು ಜಯಲಲಿತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.