ADVERTISEMENT

'ಗ್ಲೋಬಲ್ ಸೌತ್‌’ಗಾಗಿ ಭಾರತದ ಹೊಸ ದೃಷ್ಟಿಕೋನವನ್ನು ಪ್ರಕಟಿಸಿದ ಮೋದಿ

ಪಿಟಿಐ
Published 12 ಮಾರ್ಚ್ 2025, 8:56 IST
Last Updated 12 ಮಾರ್ಚ್ 2025, 8:56 IST
<div class="paragraphs"><p> ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

– ಪಿಟಿಐ ಚಿತ್ರ

ಪೋರ್ಟ್ ಲೂಯಿಸ್: ಜಾಗತಿಕ ದಕ್ಷಿಣದ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ಪ್ರಕಟಿಸಿದ್ದಾರೆ.

ADVERTISEMENT

ಈ ದೃಷ್ಟಿಕೋನವು ಈ ಪ್ರದೇಶಗಳಾದ್ಯಂತ ಭದ್ರತೆ ಮತ್ತು ಪರಸ್ಪರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದಿದ್ದಾರೆ.

‘ಜಾಗತಿಕ ದಕ್ಷಿಣಕ್ಕೆ ‘ಮಹಾಸಾಗರ್’ ಎಂಬ ನಮ್ಮ ದೃಷ್ಟಿಕೋನವು, ಈ ಪ್ರದೇಶಗಳಾದ್ಯಂತ ಭದ್ರತೆ ಮತ್ತು ಬೆಳವಣಿಗೆಯಲ್ಲಿ ಪರಸ್ಪರ ಮತ್ತು ಸಮಗ್ರ ಪ್ರಗತಿ’ಯ ಉದ್ದೇಶ ಹೊಂದಿದೆ ಎಂದು ಮಾರಿಷಸ್ ಭೇಟಿಯ ಎರಡನೇ ಮತ್ತು ಕೊನೆಯ ದಿನದಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಮ್ಮ ದೃಷ್ಟಿಕೋನವು ಅಭಿವೃದ್ಧಿಗಾಗಿ ವ್ಯಾಪಾರ, ಸುಸ್ಥಿರ ಬೆಳವಣಿಗೆಗಾಗಿ ಸಾಮರ್ಥ್ಯ ವೃದ್ಧಿ ಮತ್ತು ಭವಿಷ್ಯಕ್ಕಾಗಿ ಪರಸ್ಪರ ಭದ್ರತೆಯ ಮೇಲೆ ಕೇಂದ್ರೀಕರಿಸುತ್ತದೆ’ಎಂದು ಅವರು ಹೇಳಿದ್ದಾರೆ.

ಮಾರಿಷಸ್ ಅನ್ನು ಭಾರತದ ಪ್ರಮುಖ ಪಾಲುದಾರ ರಾಷ್ಟ್ರ ಎಂದು ಮೋದಿ ಬಣ್ಣಿಸಿದ್ದಾರೆ.

10 ವರ್ಷಗಳ ಹಿಂದೆ ಮಾರಿಷಸ್‌ನಲ್ಲಿ ಭಾರತದಿಂದ ಈ ಪ್ರದೇಶದ ಜನರಿಗೆ ಭದ್ರತೆ ಮತ್ತು ಬೆಳವಣಿಗೆಯ ದೃಷ್ಟಿಕೋನವನ್ನು ಹೇಗೆ ರೂಪಿಸಲಾಯಿತು ಎಂಬುದನ್ನು ಅವರು ಮೆಲುಕು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.