ADVERTISEMENT

ಇಂಡಿಯನ್ ಮುಜಾಹಿದ್ದೀನ್‌ ಹೆಸರಲ್ಲೂ INDIA ಇದೆ; ಪ್ರಧಾನಿ ತೀಕ್ಷ್ಣ ವಾಗ್ದಾಳಿ

ಪಿಟಿಐ
Published 25 ಜುಲೈ 2023, 7:05 IST
Last Updated 25 ಜುಲೈ 2023, 7:05 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ    

ನವದೆಹಲಿ: ಭಯೋತ್ಪಾದಕ ಸಂಘಟನೆ ಇಂಡಿಯನ್‌ ಮುಜಾಹಿದ್ದೀನ್‌ ಹೆಸರಿನಲ್ಲೂ INDIA ಇದೆ ಎಂದು ವಿರೋಧ ಪಕ್ಷಗಳ ಮೈತ್ರಿ ಒಕ್ಕೂಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.


ಮಂಗಳವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ‘ಈ ರೀತಿಯ ಗೊತ್ತು ಗುರಿಯಿಲ್ಲದ ವಿಪಕ್ಷಗಳನ್ನು ನೋಡಿಯೇ ಇರಲಿಲಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌, ಈಸ್ಟ್‌ ಇಂಡಿಯಾ ಕಂಪನಿ, ಇಂಡಿಯನ್‌ ಮುಜಾಹಿದ್ದೀನ್‌, ಪಾಪ್ಯಲರ್‌ ಫ್ರಂಟ್‌ ಆಫ್‌ ಇಂಡಿಯಾ ಈ ಎಲ್ಲದರಲ್ಲೂ ಭಾರತ (INDIA) ಇದೆ. ಹಾಗೆಂದ ಮಾತ್ರಕ್ಕೆ ಭಾರತ ಎಂದರೆ ಎಲ್ಲವೂ ಅಲ್ಲ ಎಂದು ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರತಿಪಕ್ಷಗಳೆಂದರೆ ‘ಸೋತ, ಹತಾಶಗೊಂಡ, ಮೋದಿಯನ್ನು ವಿರೋಧಿಸುವ ಒಂದೇ ಅಜೆಂಡಾವನ್ನು ಹೊಂದಿರುವ ಪಕ್ಷಗಳಾಗಿವೆ‘ ಎಂದು ವಿಪಕ್ಷಗಳನ್ನು ಗುರಿಯಾಗಿಸಿ ಹೇಳಿದ್ದಾರೆ.

ADVERTISEMENT

ಕಳೆದ ವಾರ ಬೆಂಗಳೂರಿನಲ್ಲಿ ನಡೆದ 26 ಪಕ್ಷಗಳ ಸಭೆಯಲ್ಲಿ ಮೋದಿ I–N–D–I–A ಎನ್ನುವುದು ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ ಸಂಕ್ಷಿಪ್ತ ರೂಪ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.