ADVERTISEMENT

ತೆಲುಗು ನಟ ಚಂದ್ರ ಮೋಹನ್‌ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಪಿಟಿಐ
Published 11 ನವೆಂಬರ್ 2023, 16:16 IST
Last Updated 11 ನವೆಂಬರ್ 2023, 16:16 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

-ಪಿಟಿಐ ಚಿತ್ರ

ನವದೆಹಲಿ: ಹೃದಯಾಘಾತದಿಂದ ಇಂದು ನಿಧನರಾದ ತೆಲುಗು ನಟ ಚಂದ್ರ ಮೋಹನ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

ADVERTISEMENT

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ‘ಚಂದ್ರ ಮೋಹನ್‌ ತೆಲುಗು ಸಿನಿರಂಗದ ಧೀಮಂತ ನಟರಾಗಿದ್ದರು. ಅವರ ಅಭಿನಯವು ಮುಂದಿನ ಪೀಳಿಗೆಗೂ ಮಾರ್ಗದಶರ್ನ ನೀಡುವಂತದದ್ದು ಎಂದಿದ್ದಾರೆ.

‘ಸೃಜನಾತ್ಮಕ ಸಿನಿ ಜಗತ್ತಿನಲ್ಲಿ ಅವರ ನಿರ್ಗಮನವು ಒಂದು ಶೂನ್ಯದಂತೆ ಭಾಸವಾಗುತ್ತಿದೆ. ಅವರ ಕುಟುಂಬದವರು ಈ ದುಃಖ ಭರಿಸುವಂತಾಗಲಿ‘ ಎಂದು ಹೇಳಿದ್ದಾರೆ.

ಐದು ದಶಕಗಳ ಕಾಲ ತೆಲುಗು ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ್ದ ಅವರು ಬಹುಮುಖ ಪ್ರತಿಭೆಯಿಂದ ಜನಮನ್ನಣೆ ಗಳಿಸಿದ್ದರು.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಇಂದು (ಶನಿವಾರ) ಬೆಳಿಗ್ಗೆ ಕೊನೆಯುಸಿರೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.