ADVERTISEMENT

ಕಾಂಗ್ರೆಸ್‌ ಅನ್ನು ಬಿಹಾರ ತಿರಸ್ಕರಿಸಿದೆ: ಪ್ರಧಾನಿ

ಪಿಟಿಐ
Published 16 ನವೆಂಬರ್ 2025, 0:10 IST
Last Updated 16 ನವೆಂಬರ್ 2025, 0:10 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ </p></div>

ಪ್ರಧಾನಿ ನರೇಂದ್ರ ಮೋದಿ

   

ಸೂರತ್‌: ‘ಮುಸ್ಲಿಂ ಲೀಗ್‌– ಮಾವೋವಾದಿ ಸಂಯೋಜನೆಯಾಗಿ ಮಾರ್ಪಟ್ಟಿರುವ ಕಾಂಗ್ರೆಸ್‌ ಪಕ್ಷವನ್ನು ಮತ್ತು ಜಾತೀಯತೆಯ ವಿಷ ಬಿತ್ತುವ ವಿರೋಧ ಪಕ್ಷವನ್ನು ಬಿಹಾರದ ಜನರು ತಿರಸ್ಕರಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು. 

ಗುಜರಾತಿನ ಸೂರತ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಬಿಹಾರದಲ್ಲಿ ಎನ್‌ಡಿಎ ಪ್ರಚಂಡ ವಿಜಯಕ್ಕೆ ಮಹಿಳೆಯರು ಮತ್ತು ಯುವ ಸಮುದಾಯ ಕಾರಣ’ ಎಂದರು. 

ADVERTISEMENT

ದಲಿತ ಸಮುದಾಯ ಪ್ರಬಲವಾಗಿರುವ ಬಿಹಾರದ 38 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು 34 ಕಡೆ ಗೆದ್ದಿದ್ದಾರೆ. ಇದು ದಲಿತ ಸಮುದಾಯದವರೂ ವಿರೋಧ ಪಕ್ಷವನ್ನು ತಿರಸ್ಕರಿಸಿರುವುದನ್ನು ತೋರಿಸುತ್ತದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.