ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹಿಮಾಚಲ ಪ್ರದೇಶದ ಭೇಟಿ ವೇಳೆಯಲ್ಲಿ 'ಶೇರ್ ಆಯಾ, ಶೇರ್ ಆಯಾ' ಘೋಷಣೆಯೊಂದಿಗೆ ಸ್ವಾಗತಿಸಲಾಯಿತು.
ಪ್ರಧಾನಿ ಮೋದಿ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು 'ದೇಖೋ ದೇಖೋ ಕೌನ್ ಆಯಾ, ಶೇರ್ ಆಯಾ...ಶೇರ್ ಆಯಾ...'ಎಂದು ಜಯಘೋಷ ಹಾಕಿದರು.
ಹಿಮಾಚಲ ಪ್ರದೇಶದ ಉನಾದಲ್ಲಿ ಪ್ರಧಾನಿ ಮೋದಿ ಅವರು ಇಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು.
ಈ ರೈಲು ಹಿಮಾಚಲ ಪ್ರದೇಶದ ಅಂಬ್ ಅಂದೌರಾದಿಂದ ನವದೆಹಲಿಗೆ ಸಂಚರಿಸಲಿದೆ.
ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಂದೇ ಭಾರತ್ ರೈಲು ಗಮ್ಯಸ್ಥಾನವನ್ನು ಮತ್ತಷ್ಟು ಬೇಗನೇ ತಲುಪಲು ನೆರವಾಗಲಿದೆ.
ಈ ರೈಲು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.