ADVERTISEMENT

ಸಿಕ್ಕಿಂನಲ್ಲಿ ದೇಶದ 100ನೇ ವಿಮಾನ ನಿಲ್ದಾಣ; ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2018, 10:47 IST
Last Updated 24 ಸೆಪ್ಟೆಂಬರ್ 2018, 10:47 IST
ಸಿಕ್ಕಿಂ ಮೊದಲ ವಿಮಾನ ನಿಲ್ದಾಣದ ರನ್‌ ವೇ 
ಸಿಕ್ಕಿಂ ಮೊದಲ ವಿಮಾನ ನಿಲ್ದಾಣದ ರನ್‌ ವೇ    

ಪಾಕ್ಯೊಂಗ್‌: ಸಿಕ್ಕಿಂನ ಮೊದಲ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆ ಮಾಡಿದರು.

ಪೊಕ್ಯೊಂಗ್‌ನಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ದೇಶದ 100ನೇ ವಿಮಾನ ನಿಲ್ದಾಣವಾಗಿದ್ದು, ಇದು ಪರ್ವತಗಳ ನಾಡು ಸಿಕ್ಕಿಂ ಹಾಗೂ ದೇಶಕ್ಕೆ ಐತಿಹಾಸಿಕ ದಿನ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‌ನಿಂದ 33 ಕಿ.ಮೀ. ದೂರದಲ್ಲಿ 2009ರಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಒಂಬತ್ತು ವರ್ಷಗಳ ಬಳಿಕ ಸಿಕ್ಕಿಂನ ಮೊದಲ ವಿಮಾನ ನಿಲ್ದಾಣದ ಕನಸು ಸಾಕಾರಗೊಂಡಿದೆ.

ADVERTISEMENT

ಅಕ್ಟೋಬರ್‌ 4ರಿಂದ ಪಾಕ್ಯೊಂಗ್ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನ ಹಾರಾಟ ಪ್ರಾರಂಭವಾಗಲಿದೆ.

ಇಂಡೊ–ಚೀನಾ ಗಡಿ ಭಾಗದಿಂದ 60 ಕಿ.ಮೀ. ದೂರದಲ್ಲಿರುವ ವಿಮಾನ ನಿಲ್ದಾಣವು 201 ಎಕರೆ ವಿಸ್ತಾರವಾಗಿದೆ. ಪಾಕ್ಯೊಂಗ್ ಗ್ರಾಮದಿಂದ ಸುಮಾರು 2 ಕಿ.ಮೀ. ಎತ್ತರ, ಸಮುದ್ರ ಮಟ್ಟದಿಂದ 4,500 ಅಡಿ ಎತ್ತರದಲ್ಲಿ ಈ ವಿಮಾನ ನಿಲ್ದಾಣ ನಿರ್ಮಿಸಿರುವುದಾಗಿ ಸಿಕ್ಕಿಂ ಮುಖ್ಯ ಕಾರ್ಯದರ್ಶಿ ಎ.ಕೆ.ಶ್ರೀವಾಸ್ತವ ಮಾಹಿತಿ ನೀಡಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ,'ದೇಶ ಸ್ವಾತಂತ್ರ್ಯಗೊಂಡ ನಂತರದಿಂದ 2014ರ ವರೆಗೂ ಭಾರತದಲ್ಲಿ 65 ವಿಮಾನ ನಿಲ್ದಾಣಗಳು ಮಾತ್ರ ಇದ್ದವು. ಕಳೆದ ನಾಲ್ಕು ವರ್ಷಗಳಲ್ಲಿ 35 ವಿಮಾನ ನಿಲ್ದಾಣಗಳನ್ನು ‍ಪ್ರಾರಂಭಿಸಲಾಗಿದೆ. ಭಾರತದ ಅಭಿವೃದ್ಧಿಯಲ್ಲಿ ಈಶಾನ್ಯ ಭಾಗವನ್ನು ಕೇಂದ್ರವಾಗಿಸಲು ಬದ್ಧರಾಗಿದ್ದೇವೆ. ಸ್ವಾತಂತ್ರ್ಯಾ ನಂತರದಿಂದ ಇದೇ ಮೊದಲ ಬಾರಿಗೆ ವಾಯುಮಾರ್ಗ ಹಾಗೂ ರೈಲ್ವೆ ಮಾರ್ಗಗಳ ಮೂಲಕ ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಒತ್ತು ನೀಡಲಾಗಿದೆ' ಎಂದರು.

ಸಿಕ್ಕಿಂ ಪ್ರಕೃತಿ ಸೊಬಗನ್ನು ಪ್ರಕಟಿಸಿರುವ ಪ್ರಧಾನಿ ಮೋದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.