ADVERTISEMENT

ದೆಹಲಿಯಲ್ಲಿ ಬಿಜೆಪಿಯ ನೂತನ ಕಚೇರಿ: ನಾಳೆ ಪ್ರಧಾನಿ ಮೋದಿ ಚಾಲನೆ

ಪಿಟಿಐ
Published 28 ಸೆಪ್ಟೆಂಬರ್ 2025, 10:08 IST
Last Updated 28 ಸೆಪ್ಟೆಂಬರ್ 2025, 10:08 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ರಾಷ್ಟ್ರ ರಾಜಧಾನಿಯ ದೀನ ದಯಾಳ್‌ ಉಪಾಧ್ಯಾಯ ಮಾರ್ಗದಲ್ಲಿ ನಿರ್ಮಾಣವಾಗಿರುವ ಬಿಜೆಪಿಯ ನೂತನ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಲಿದ್ದಾರೆ ಎಂದು ಪಕ್ಷದ ದೆಹಲಿ ಘಟಕದ ಮುಖ್ಯಸ್ಥ ತಿಳಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ವೀರೇಂದ್ರ ಸಚದೇವ್‌, ಕಚೇರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದಕ್ಕೆ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿದ್ದಾರೆ. ಹಾಗೆಯೇ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು 2023ರ ಜೂನ್ 9ರಂದು ಭೂಮಿ ಪೂಜೆ ನೆರವೇರಿಸಿದ್ದರು ಎಂದು ಸ್ಮರಿಸಿದ್ದಾರೆ.

ADVERTISEMENT

'ಪಕ್ಷ ಸ್ಥಾಪನೆಯಾದಾಗ ಮೊದಲ ಕಚೇರಿಯನ್ನು ಅಜ್ಮೇರಿ ಗೇಟ್‌ನಲ್ಲಿ ತೆರೆಯಲಾಗಿತ್ತು. ನಂತರ ಕೆಲ ಸಮಯದ ಮಟ್ಟಿಗೆ ಅದು ರಾಕಾಬ್‌ಗಂಜ್‌ ರಸ್ತೆಗೆ ಸ್ಥಳಾಂತರಗೊಂಡಿತ್ತು. 14 ಪಂಡಿತ್‌ ಪಂತ್ ಮಾರ್ಗದಲ್ಲಿ ಸುಮಾರು 35 ವರ್ಷಗಳವರೆಗೆ ಕಚೇರಿ ಕಾರ್ಯಾಚರಿಸಿತ್ತು. ಇದೀಗ, ದೀನ ದಯಾಳ್‌ ಉಪಾಧ್ಯಾಯ ಮಾರ್ಗದಲ್ಲಿ ನಿರ್ಮಾಣಗೊಂಡಿರುವ ತನ್ನದೇ ಕಟ್ಟಡಕ್ಕೆ ನಾಳೆ (ಸೋಮವಾರ) ಬಿಜೆಪಿ ಕಚೇರಿ ಸ್ಥಳಾಂತರಗೊಳ್ಳಲಿದೆ. ಈ ಪ್ರಯಾಣವು ಹೋರಾಟದಿಂದ ಕೂಡಿದ್ದು, ಅಪೂರ್ವವಾದದ್ದು' ಎಂದು ಹೇಳಿಕೊಂಡಿದ್ದಾರೆ.

ಕೇಂದ್ರ ಹಾಗೂ ದೆಹಲಿ ಸಚಿವರು, ನಾಯಕರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.