ADVERTISEMENT

ಪ್ರಧಾನಿ ಮೋದಿ ಭೇಟಿಯಾದ ಅಡ್ಮಿರಲ್‌ ಡಿ.ಕೆ. ಜೋಶಿ

ಪಿಟಿಐ
Published 2 ಅಕ್ಟೋಬರ್ 2025, 14:12 IST
Last Updated 2 ಅಕ್ಟೋಬರ್ 2025, 14:12 IST
ನಿವೃತ್ತ ಲೆಫ್ಟಿನೆಂಟ್ ಗವರ್ನರ್‌ ಅಡ್ಮಿರಲ್‌ ಡಿ.ಕೆ.ಜೋಶಿ ಮತ್ತು ಪ್ರಧಾನಿ ನರೇಂದ್ರ ಮೋದಿ
ನಿವೃತ್ತ ಲೆಫ್ಟಿನೆಂಟ್ ಗವರ್ನರ್‌ ಅಡ್ಮಿರಲ್‌ ಡಿ.ಕೆ.ಜೋಶಿ ಮತ್ತು ಪ್ರಧಾನಿ ನರೇಂದ್ರ ಮೋದಿ   

ಪೋರ್ಟ್‌ ಬ್ಲೇರ್‌: ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿ ಪೂರ್ಣಗೊಳ್ಳುವ ಹಂತದಲ್ಲಿರುವ ಮೂಲಸೌಕರ್ಯಗಳ ಸ್ಥಿತಿಗತಿಗಳ ಕುರಿತು ನಿವೃತ್ತ ಲೆಫ್ಟಿನೆಂಟ್ ಗವರ್ನರ್‌ ಅಡ್ಮಿರಲ್‌ ಡಿ.ಕೆ.ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಮಾಹಿತಿ ನೀಡಿದರು.

ಪ್ರಧಾನಿ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ಜೋಶಿ ಅವರು, ಅಂಡಮಾನ್‌ ಮತ್ತು ನಿಕೋಬಾರ್‌ ಅನ್ನು ಇಂಡೋ–ಪೆಸಿಫಿಕ್‌ ಪ್ರದೇಶದಲ್ಲಿ ಪ್ರಮುಖ ಆರ್ಥಿಕ ವಲಯವನ್ನಾಗಿ ಪರಿವರ್ತಿಸುವ ಯೋಜನೆಯ ಮಾರ್ಗಸೂಚಿಯನ್ನು ವಿವರಿಸಿದರು ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ, ಅಂತರರಾಷ್ಟ್ರೀಯ ಕಂಟೇನರ್‌ ಟ್ರಾನ್ಸ್‌ಶಿಪ್‌ಮೆಂಟ್‌ ಟರ್ಮಿನಲ್‌, ವಿದ್ಯುತ್‌ ಸ್ಥಾವರ ಸೇರಿದಂತೆ ಗ್ರೇಟ್‌ ನಿಕೋಬಾರ್‌ ದ್ವೀಪ (ಜಿಎನ್‌ಐ) ಯೋಜನೆಯ ಸ್ಥಿತಿ–ಗತಿಗಳ ಬಗ್ಗೆ ಜೋಶಿ ಅವರು ವಿವರಿಸಿದರು. 

ADVERTISEMENT

ದ್ವೀಪಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಕಳೆದ ವರ್ಷ ದೇಶಿಯ ಪ್ರವಾಸಿಗರ ಭೇಟಿ ಶೇ 41ರಷ್ಟು ಮತ್ತು ವಿದೇಶಿ ಪ್ರವಾಸಿಗರ ಭೇಟಿ ಶೇ 27ರಷ್ಟು ಹೆಚ್ಚಾಗಿದೆ ಎಂದು ಜೋಶಿ ಅವರು ಪ್ರಧಾನಿಗೆ ತಿಳಿಸಿದ್ದಾರೆ.

ನಂತರ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್ ಅವರನ್ನು ಜೋಶಿ ಭೇಟಿ ಮಾಡಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.