ADVERTISEMENT

ಲಾಲ್‌ಚೌಕ್‌ ಧ್ವಜಾರೋಹಣದ ಶ್ರೇಯಸ್ಸು ಮೋದಿಗೆ ಸಲ್ಲಬೇಕು: ರವೀಂದರ್‌ ರೈನಾ

ಪಿಟಿಐ
Published 29 ಜನವರಿ 2023, 13:46 IST
Last Updated 29 ಜನವರಿ 2023, 13:46 IST
ರವೀಂದರ್‌ ರೈನಾ
ರವೀಂದರ್‌ ರೈನಾ   

ಜಮ್ಮು: ‘ಶ್ರೀನಗರದ ಐತಿಹಾಸಿಕ ಲಾಲ್‌ಚೌಕ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರಾಷ್ಟ್ರಧ್ವಜಾರೋಹಣ ಮಾಡಿರುವುದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು’ ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷ ರವೀಂದರ್‌ ರೈನಾ ಭಾನುವಾರ ಹೇಳಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವ ಮೂಲಕ ಮೋದಿ ಅವರು ಅಲ್ಲಿನ ಪರಿಸ್ಥಿತಿಯನ್ನು ಸಹಜಗೊಳಿಸಿದ್ದಾರೆ’ ಎಂದೂ ಬಣ್ಣಿಸಿದ್ದಾರೆ.

‘ಮೋದಿ ಅವರು 370ನೇ ವಿಧಿ ರದ್ದುಗೊಳಿಸುವ ಮೂಲಕ ಪ್ರತ್ಯೇಕತೆಗೆ ಮತ್ತು ಭಯೋತ್ಪಾದನೆಗೆ ತೀವ್ರ ಹೊಡೆತ ನೀಡಿದ್ದಾರೆ ಮತ್ತು ರಾಷ್ಟ್ರೀಯವಾದಿ ಶಕ್ತಿಗಳನ್ನು ಬಲಪಡಿಸಿದ್ದಾರೆ. ಇದರಿಂದಾಗಿ ರಾಹುಲ್‌ ಅವರಿಗೆ ಧ್ವಜಾರೋಹಣ ಮಾಡಲು ಸಾಧ್ಯವಾಗಿದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

'ದೇಶದಲ್ಲಿ ಸುಮಾರು ಏಳು ದಶಕಗಳ ಕಾಲ ಕಾಂಗ್ರೆಸ್‌ ಆಡಳಿತ ನಡೆಸಿದ್ದರೂ ಆ ಪಕ್ಷದ ಯಾವ ನಾಯಕನೂ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಧೈರ್ಯ ತೋರಿಲ್ಲ’ ಎಂದೂ ಟೀಕಿಸಿದ್ದಾರೆ.

‘ಭಯೋತ್ಪಾದನೆಯು ಉತ್ತುಂಗದಲ್ಲಿದ್ದ 1990ರ ಕಾಲದಲ್ಲೇ ಮೋದಿ ಅವರು ಅಂದು ಬಿಜೆಪಿ ಅಧ್ಯಕ್ಷರಾಗಿದ್ದ ಮುರಳಿ ಮನೋಹರ ಜೋಶಿ ಅವರೊಂದಿಗೆ ಲಾಲ್‌ಚೌಕ್‌ನಲ್ಲಿ ಧ್ವಜಾರೋಹಣ ಮಾಡಿದ್ದರು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.