ADVERTISEMENT

ಪ್ರತಿಕೂಲ ಹವಾಮಾನ: ಪ್ರಧಾನಿ ಮೋದಿ ಸಿಕ್ಕಿಂ ಭೇಟಿ ರದ್ದು; ವರ್ಚುವಲ್‌ನಲ್ಲಿ ಭಾಗಿ

ಪಿಟಿಐ
Published 29 ಮೇ 2025, 5:37 IST
Last Updated 29 ಮೇ 2025, 5:37 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ಗ್ಯಾಂಗ್ಟಕ್: ಪ್ರತಿಕೂಲ ಹವಾಮಾನದ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿಯವರು ಸಿಕ್ಕಿಂ ಭೇಟಿಯನ್ನು ರದ್ದುಗೊಳಿಸಿ, ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸಿಕ್ಕಿಂಗೆ ರಾಜ್ಯ ಸ್ಥಾನಮಾನ ದೊರೆತು 50 ವರ್ಷವಾದ ಹಿನ್ನೆಲೆ ಗ್ಯಾಂಗ್ಟಕ್‌ನಲ್ಲಿ ಗುರುವಾರ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಬೇಕಿತ್ತು.

ADVERTISEMENT

ಸಿಕ್ಕಿಂ ರಾಜ್ಯಕ್ಕೆ 50 ವರ್ಷ ಪೂರ್ಣವಾದ ಸ್ಮರಣಾರ್ಥ ನಾಣ್ಯ, ಸ್ಮರಣಿಕೆ ಮತ್ತು ಅಂಚೆಚೀಟಿಯನ್ನು ಬಿಡುಗಡೆ ಮಾಡಬೇಕಿತ್ತು. ಜತೆಗೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಬೇಕಿತ್ತು. ಆದರೆ ಹವಾಮಾನ ಸ್ಥಿತಿ ಸರಿಯಿಲ್ಲದ ಕಾರಣ ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.