ADVERTISEMENT

ಜಿ 20 ಶೃಂಗಸಭೆ: ಪ್ರಮುಖ ಚರ್ಚೆಗಳಲ್ಲಿ ಪಾಲ್ಗೊಳ್ಳಲಿರುವ ಮೋದಿ

ಸೋಮವಾರ ಬಾಲಿಗೆ ಪಯಣ

ಪಿಟಿಐ
Published 13 ನವೆಂಬರ್ 2022, 13:41 IST
Last Updated 13 ನವೆಂಬರ್ 2022, 13:41 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಇಂಡೊನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್‌ ರೂಪಾಂತರ ಮತ್ತು ಆರೋಗ್ಯ ವಿಷಯಗಳ ಕುರಿತ ಚರ್ಚೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವರು ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಭಾನುವಾರ ತಿಳಿಸಿದ್ದಾರೆ.

ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಅವರು ಸೋಮವಾರ ಬಾಲಿಗೆ ತೆರಳಲಿದ್ದಾರೆ ಎಂದೂ ಹೇಳಿದ್ದಾರೆ.

ಶೃಂಗಸಭೆಯಲ್ಲಿ ಉಕ್ರೇನ್‌ ಯುದ್ಧ ಮತ್ತು ಅದರ ಪರಿಣಾಮಗಳು ಸೇರಿದಂತೆ ಜಾಗತಿಕ ಮಟ್ಟದ ವಿವಿಧ ಸವಾಲುಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.

ADVERTISEMENT

ಜಾಗತಿಕ ಆರ್ಥಿಕತೆ, ಇಂಧನ, ಪರಿಸರ ಮೊದಲಾದ ವಿಚಾರಗಳ ಬಗ್ಗೆ ಮೋದಿ ಅವರು ಇತರ ನಾಯಕರ ಜೊತೆ ಮಾತುಕತೆ ನಡೆಸುವರು ಎಂದೂ ವಿವರಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್‌, ಜರ್ಮನಿಯ ಚಾನ್ಸೆಲರ್‌ ಒಲಾಫ್ ಸ್ಕಾಲ್ಜ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಪಾಲ್ಗೊಳ್ಳುವರು.

ಇಂಡೊನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಅವರ ಆಹ್ವಾನದ ಮೇರೆಗೆ ಮೋದಿ ಅವರು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದು, ಬಾಲಿಯಲ್ಲಿ 45 ಗಂಟೆಗಳ ವಾಸ್ತವ್ಯದ ಅವಧಿಯಲ್ಲಿ ಅವರು 20 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದು ಮೂಲಗಳು ತಿಳಿಸಿವೆ.

ಭಾರತವು ಡಿಸೆಂಬರ್ 1 ರಿಂದ ಔಪಚಾರಿಕವಾಗಿ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.