ADVERTISEMENT

ತಮಿಳುನಾಡು: ಜ. 20,21ರಂದು ವಿವಿಧ ದೇಗುಲಗಳಿಗೆ ಮೋದಿ ಭೇಟಿ

ಪಿಟಿಐ
Published 18 ಜನವರಿ 2024, 16:05 IST
Last Updated 18 ಜನವರಿ 2024, 16:05 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಜನವರಿ 20 ಮತ್ತು 21ರಂದು ತಮಿಳುನಾಡಿನ ಪ್ರಮುಖ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಗುರುವಾರ ತಿಳಿಸಿದೆ.

ಅಯೋಧ್ಯೆಯಲ್ಲಿ ಜ. 22ರಂದು ನಡೆಯಲಿರುವ ರಾಮಲಲ್ಲಾ ವಿಗ್ರಹ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅವರು, ರಾಮ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ದೇಗುಲಗಳು ಹಾಗೂ ಸ್ಥಳಗಳಿಗೆ ಭೇಟಿ ನೀಡುತ್ತಿದ್ಧಾರೆ.

ADVERTISEMENT

‘ಜ.20ರಂದು 11 ಗಂಟೆಗೆ ತಿರುಚಿರಾಪಲ್ಲಿಯ ಶ್ರೀರಂಗನಾಥ ಸ್ವಾಮಿ ದೇಗುಲದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮೋದಿ, ಕಂಬ ರಾಮಾಯಣದ ವಿವಿಧ ಕಥೆಗಳನ್ನು ಕೇಳಲಿದ್ದಾರೆ.

ಅದೇ ದಿನ 2 ಗಂಟೆಗೆ ರಾಮೇಶ್ವರಕ್ಕೆ ತೆರಳಿ, ಅರುಳ್ಮಿಗು ರಾಮಾನಾಥಸ್ವಾಮಿ ದೇವರ ಪೂಜೆ ನೆರವೇರಿಸಲಿದ್ದಾರೆ. 21ರಂದು  ಅವರು ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ರಾಮಸೇತುವೆ ನಿರ್ಮಾಣವಾದ ಸ್ಥಳ ಎಂಬ ಪ್ರತೀತಿ ಇರುವ ಅರಿಚಲ್ ಮುನೈಗೂ ಅವರು ಭೇಟಿ ನೀಡುವರು ಎಂದು ಪಿಎಂಒ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.