ADVERTISEMENT

ಅತ್ಯುತ್ತಮ ಸ್ಮಾರ್ಟ್‌ ನಗರ ಪಟ್ಟಿಯಲ್ಲಿ ವಾರಾಣಸಿಗೆ ಸ್ಥಾನ

ಪಿಟಿಐ
Published 9 ಫೆಬ್ರುವರಿ 2020, 17:25 IST
Last Updated 9 ಫೆಬ್ರುವರಿ 2020, 17:25 IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಕ್ಷೇತ್ರ 20 ಅತ್ಯುತ್ತಮಸ್ಮಾರ್ಟ್‌ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, 20 ಅತ್ಯುತ್ತಮ ನಗರ ಮತ್ತು 20 ಹಿಂದುಳಿದನಗರಗಳನ್ನು ಜೋಡಿ ಮಾಡಿದ್ದು, ಇವೆರಡೂ ನಗರಗಳು ‘ಸಹೋದರ ನಗರಗಳಾಗಿ’ ಕಾರ್ಯನಿರ್ವಹಿಸಲಿದೆ.

ಫೆ.20ಕ್ಕೂ ಮೊದಲು ಅತ್ಯುತ್ತಮ ಮತ್ತು ಹಿಂದುಳಿದ ನಗರಗಳುಒಪ್ಪಂದ ಪತ್ರ (ಎಂಒಯು)ಕ್ಕೆ ಸಹಿ ಹಾಕುವಂತೆ ಸಚಿವಾಲಯ ಸೂಚಿಸಿದೆ.

ADVERTISEMENT

ಸಂಸ್ಕೃತಿಗಳಲ್ಲಿ ಸಾಮ್ಯತೆಯಿರುವ ನಗರಗಳನ್ನು ಜೋಡಿ ಮಾಡಲಾಗಿದ್ದು, ವಾರಾಣಸಿ, ಅಮೃತಸರದ ಜತೆ ಆಗಿದೆ.

ಅಭಿವೃದ್ಧಿ ಹೊಂದಿದ ನಗರ:ಅಹಮದಾಬಾದ್‌ ಮೊದಲ ಸ್ಥಾನದಲ್ಲಿದ್ದು, ನಾಗ್ಪುರ, ರಾಂಚಿ, ಭೋಪಾಲ್‌, ಸೂರತ್‌, ಕಾನ್ಪುರ, ಇಂದೋರ್‌, ವಿಶಾಖಪಟ್ಟಣ, ವೆಲ್ಲೂರು, ವಡೋದರ, ನಾಸಿಕ್, ಆಗ್ರಾ, ವಾರಾಣಸಿ, ದಾವಣಗೆರೆ, ಕೋಟ, ಪುಣೆ, ಉದಯಪುರ,ಡೆಹರಾಡೂನ್‌, ಅಮರಾವತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.