ADVERTISEMENT

‘ವಂದೇ ಭಾರತ್’ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ ಮೋದಿ

ಏಜೆನ್ಸೀಸ್
Published 15 ಫೆಬ್ರುವರಿ 2019, 10:36 IST
Last Updated 15 ಫೆಬ್ರುವರಿ 2019, 10:36 IST
   

ನವದೆಹಲಿ: ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ತಯಾರಾದ ಭಾರತದ ಮೊದಲ ಸೆಮಿಸ್ಪೀಡ್‌ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಶುಕ್ರವಾರ ಚಾಲನೆ ನೀಡಿದ್ದಾರೆ.

ದೆಹಲಿ–ವಾರಾಣಸಿ ನಡುವೆ ಸಂಚರಿಸುವ ಈ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಓಡಲಿದೆ.

ಭಾರತದ ಅತ್ಯಂತ ವೇಗದ `ಟ್ರೈನ್ 18'ರೈಲುವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಬದಲಾಯಿಸಲಾಗಿದೆ.

ADVERTISEMENT

ರೈಲಿನ ವೆಚ್ಚ
16 ಬೋಗಿಗಳನ್ನು ಹೊಂದಿರುವ ರೈಲು18 ತಿಂಗಳಲ್ಲಿ, 97 ಕೋಟಿ ವೆಚ್ಚದಲ್ಲಿ ತಯಾರಾಗಿದೆ. ಈ ಹೊಣೆಯನ್ನು ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿರುವ ಆಧುನಿಕ ರೈಲು ಕೋಚ್‌ ಕಾರ್ಖಾನೆ ಹೊತ್ತುಕೊಂಡಿತ್ತು. ವೈ–ಫೈ, ಜಿಪಿಎಸ್‌ ವ್ಯವಸ್ಥೆ, ಸ್ಪರ್ಶ ರಹಿತ ವ್ಯಾಕ್ಯುಮ್ ಶೌಚಾಲಯ, ಎಲ್‌ಇಡಿ ಬೆಳಕಿನ ವ್ಯವಸ್ಥೆ,ಹವಾ ನಿಯಂತ್ರಣ ವ್ಯವಸ್ಥೆ ಸೇರಿದಂತೆ ಆಧುನಿಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಟಿಕೆಟ್ ದರ
ಟಿಕೆಟ್‌ ವಿತರಣಾ ವ್ಯವಸ್ಥೆಯನ್ನು ಎಕ್ಸಿಕ್ಯೂಟಿವ್ ಕಾರ್ ಟಿಕೆಟ್ ಹಾಗೂಚೇರ್‌ ಕಾರ್ ಎಂದು 2 ಭಾಗಗಳಾಗಿ ವಿಂಗಡಿಸಲಾಗಿದೆ. ಆಹಾರದ ಬೆಲೆಯಲ್ಲಿಯೂ ವ್ಯತ್ಯಾಸವಿದೆ. ಈ ಹಿಂದೆ ದೆಹಲಿ– ವಾರಾಣಾಸಿ ಪ್ರಯಾಣದಲ್ಲಿ ಹವಾ ಚೇರ್‌ ಕಾರ್ ಬೆಲೆ ₹1,850 ಇದ್ದದ್ದು, ₹1,760ಕ್ಕೆ ಇಳಿಸಲಾಗಿದೆ. ಎಕ್ಸಿಕ್ಯೂಟಿವ್ ₹ 3,520 ಇದ್ದದ್ದು, ₹ 3,310ಕ್ಕೆ ಕಡಿತಗೊಳಿಸಲಾಗಿದೆ. ಹಿಂದಿರುಗುವಾಗ ಚೇರ್‌ ಕಾರ್‌ ಟಿಕೆಟ್ ಬೆಲೆ ₹1,700, ಎಕ್ಸಿಕ್ಯೂಟಿವ್ ಕಾರ್ ಟಿಕೆಟ್ ಬೆಲೆ ₹3,260 ಇರಲಿದೆ. ಈ ಹಿಂದಿನ ರೈಲುಗಳಂತೆ ಹಿರಿಯ ನಾಗರಿಕರಿಗೆ ಯಾವುದೇ ವಿನಾಯಿತಿ ಈ ರೈಲಿನಲ್ಲಿ ಇರುವುದಿಲ್ಲ ಎಂದು ರೈಲ್ವೆ ಇಲಾಖೆಅಧಿಕೃತ ಆದೇಶ ಹೊರಡಿಸಿದೆ.

ತಕ್ಕ ಪ್ರತ್ಯುತ್ತರ
ಇದೇ ವೇಳೆ ಮಾತನಾಡಿದ ನರೇಂದ್ರ ಮೋದಿ, ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.