ADVERTISEMENT

ತೆಲಂಗಾಣದ ಹುತಾತ್ಮ ಯೋಧನಿಗೆ ಪ್ರಧಾನಿ ಮೋದಿಯಿಂದ ಅವಮಾನ: ರಾಹುಲ್‌ ಗಾಂಧಿ

ಪಿಟಿಐ
Published 3 ನವೆಂಬರ್ 2022, 16:09 IST
Last Updated 3 ನವೆಂಬರ್ 2022, 16:09 IST
ಹುತಾತ್ಮ ಯೋಧ ಕರ್ನಲ್‌ ಸಂತೋಷ್‌ ಬಾಬು
ಹುತಾತ್ಮ ಯೋಧ ಕರ್ನಲ್‌ ಸಂತೋಷ್‌ ಬಾಬು   

ಹೈದರಾಬಾದ್(ತೆಲಂಗಾಣ): ಪ್ರಧಾನಿ ನರೇಂದ್ರ ಮೋದಿ ಅವರು ಹುತಾತ್ಮ ಯೋಧ ಕರ್ನಲ್‌ ಸಂತೋಷ್‌ ಬಾಬು ಅವರಿಗೆ ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಪಾದಿಸಿದ್ದಾರೆ.

ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ ಸಂತೋಷ್‌ ಬಾಬುವನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದೀರಿ. ಈ ನಡುವೆ ಒಂದು ವಿಚಾರವನ್ನು ನಿಮಗೆ ನೆನಪಿಸುತ್ತೇನೆ. ಸಂತೋಷ್‌ ಬಾಬು ಅವರು ಹುತಾತ್ಮರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿಲ್ಲ ಎಂದು ಜನರಿಗೆ ಹೇಳಿದರು. ಹಾಗಾದರೆ ಕರ್ನಲ್‌ ಸಂತೋಷ್‌ ಬಾಬು ಅವರು ಹುತಾತ್ಮರಾಗಿದ್ದು ಹೇಗೆ? ಈ ವಿಚಾರದಲ್ಲಿ ಪ್ರಧಾನಿ ಮೋದಿ ಸುಳ್ಳು ಹೇಳುವ ಮೂಲಕ ಯೋಧ ಸಂತೋಷ್‌ ಬಾಬು ಅವರಿಗೆ ಅವಮಾನಿಸಿದ್ದಾರೆ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕರ್ನಲ್‌ ಸಂತೋಷ್‌ ಬಾಬು ಅವರು ತೆಲಂಗಾಣದ ಸೂರ್ಯಪೇಟೆಯವರು. 2020ರ ಜೂನ್‌ 15ರಂದು ಚೀನಾ ಪಡೆ ಜೊತೆಗಿನ ಗಾಲ್ವನ್‌ ಕಣಿವೆಯ ಸಂಘರ್ಷದಲ್ಲಿ ಹುತಾತ್ಮರಾದರು.

ಬಿಜೆಪಿ ಮತ್ತು ಆರೆಸ್ಸೆಸ್‌ ರಾಷ್ಟ್ರದಲ್ಲಿ ದ್ವೇಷ ಹರಡುತ್ತಿವೆ ಎಂದು ಆರೋಪಿಸಿದ ರಾಹುಲ್‌ ಗಾಂಧಿ, ಇವತ್ತಿಗೂ ಭಾರತದ ಸುಮಾರು 2000 ಚದರ ಕಿಲೋ ಮೀಟರ್‌ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ. ಇದನ್ನು ಹಿಂತಿರುಗಿ ಭಾರತದ ತೆಕ್ಕೆಗೆ ತೆಗೆದುಕೊಳ್ಳಲು ಪ್ರಧಾನಿ ಮೋದಿ ಯಾವಾಗ ಮತ್ತು ಏನು ಮಾಡಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ತೆಲಂಗಾಣದಲ್ಲಿ ಸಾಗುತ್ತಿರುವ ಭಾರತ್‌ ಜೋಡೊ ಯಾತ್ರೆಯ ನಡುವೆ ರಾಹುಲ್‌ ಗಾಂಧಿ ಅವರು ಬುಡಕಟ್ಟು ಸಮುದಾಯದ 'ಧಿಮ್ಸಾ' ನೃತ್ಯದಲ್ಲಿ ಕಲಾವಿದರೊಂದಿಗೆ ಹೆಜ್ಜೆ ಹಾಕಿದರು.

ಹೈದರಾಬಾದ್‌: ಭಾರತ್‌ ಜೋಡೊ ಯಾತ್ರೆಯಲ್ಲಿ
ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕಿದ ಪುಟಾಣಿ ಹುಡುಗಿ | ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.